ಯಡಿಯೂರಪ್ಪ ಕಾಲ್ಗುಣದಿಂದ ಮಳೆ ಬೆಳೆ

Yediyurappa 21 Dec 19
Published on

ಬೆಂಗಳೂರು: ಯಡಿಯೂರಪ್ಪನವರ ಕಾಲ್ಗುಣದಿಂದ ಹೈದ್ರಾಬಾದ್ ಕರ್ನಾಟಕದಲ್ಲಿ ವಿಮಾನ ಹಾರಾಟ ಶುರುವಾಗಿದೆ. ರಾಜ್ಯದಲ್ಲಿ ಮಳೆಬೆಳೆ ಚೆನ್ನಾಗಿ ಆಗುತ್ತಿದೆ ಎಂದು ಬಿಜೆಪಿ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ವಿಧಾನಸಭೆಯಲ್ಲಿ ಹಾಡಿ ಹೊಗಳಿದಾಗ ಪ್ರತಿಪಕ್ಷ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರು ಬ್ರೇಕ್ ಹಾಕಿದರು.

ಹೈದ್ರಾಬಾದ್ ಕರ್ನಾಟಕದಲ್ಲಿ ಮಳೆಯೇ ಆಗಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ ಜೆಡಿಎಸ್​ನ ಬಂಡೆಪ್ಪ ಕಾಶೆಂಪೂರ ಸದನಕ್ಕೆ ಸುಳ್ಳು ಮಾಹಿತಿ ನೀಡಬೇಡಿ ಎಂದರು. ಇದಕ್ಕೆ ನಾಡಗೌಡ ಧ್ವನಿಗೂಡಿಸಿದರು. ತೊಗರಿ ಖರೀದಿಗೆ ಸರ್ಕಾರ ಆದೇಶ ಹೊರಡಿಸಿದೆ. ರೈತರಿಂದ 10 ಕ್ವಿಂಟಾಲ್​ವರೆಗೆ ಖರೀದಿಗೆ ಆದೇಶಿಸಲಾಗಿದೆ ಎಂದು ಸಮರ್ಥಿಸಿಕೊಳ್ಳಲು ನಡಹಳ್ಳಿ ಮುಂದಾದರು. ತೊಗರಿ ಖರೀದಿ ಆರಂಭವೇ ಆಗಿಲ್ಲ. ಸುಳ್ಳು ಮಾಹಿತಿ ನೀಡಿ ಸದನದ ದಿಕ್ಕು ತಪ್ಪಿಸ ಲಾಗುತ್ತಿದೆ ಎಂದು ಪ್ರತಿಪಕ್ಷ ಸದಸ್ಯರು ಗದ್ದಲ ಎಬ್ಬಿಸಿದರು.

ಬಿಎಸ್​ವೈ ಅವರನ್ನು ಸಿಎಂ ಹುದ್ದೆಯಲ್ಲಿ ನೋಡಬೇಕು ಎಂದು ನಾಡಿನ ಜನ ಬಯಸಿದರು. ಅವರನ್ನು ಸಿಎಂ ಮಾಡಲು ಒಕ್ಕಲಿಗ, ಹಾಲುಮತ ಸೇರಿ ಹಲವು ಶಾಸಕರು ರಾಜೀನಾಮೆ ನೀಡಿದ್ದು ಇತಿಹಾಸ. ಬಿಎಸ್​ವೈ ನಿಜವಾದ ಸರ್ವ ಜನಾಂಗದ ನಾಯಕ ಎಂದು ನಡಹಳ್ಳಿ ಹೊಗಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net