ರೈತರ ಮೊಗದಲ್ಲಿ ಕಳೆ ತಂದ ಮಳೆ

ರೋಡಲಬಂಡಾ ಗ್ರಾಮದಲ್ಲಿ ಮುಂಗಾರು ಬಿತ್ತನೆ ಕಾರ್ಯದಲ್ಲಿ ತೊಡಿಗಿರುವ ರೈತರು.
ರೋಡಲಬಂಡಾ ಗ್ರಾಮದಲ್ಲಿ ಮುಂಗಾರು ಬಿತ್ತನೆ ಕಾರ್ಯದಲ್ಲಿ ತೊಡಿಗಿರುವ ರೈತರು.
Published on

ಹಟ್ಟಿಚಿನ್ನದಗಣಿ: ಮುಂಗಾರು ಮಳೆ ಉತ್ತ್ತಮ ಆರಂಭದಿಂದ ರೈತರ ಮೊಗದಲ್ಲಿ ಸಂತಸ ಮೂಡಿದ್ದು, ಕೃಷಿ ಚಟುವಟಿಕೆ ಭರದಿಂದ ಸಾಗಿದೆ. ಜಮೀನು ಹದ ಮಾಡಿಕೊಂಡಿದ್ದ ರೈತರು ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯ ಆರಂಭಿಸಿದ್ದಾರೆ.

ಮುಂಗಾರಿನ ಆರಂಭದಲ್ಲಿ ರೋಹಿಣಿ ಮಳೆ ನಿರೀಕ್ಷೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಸುರಿದಿದೆ. ಮೃಗಶಿರ ಮಳೆಯೂ ಉತ್ತಮವಾಗಿದ್ದು, ರೈತರು ಉತ್ತಮ ಇಳುವರಿ ನಿರೀಕ್ಷೆಯಲ್ಲಿ ವಿವಿಧ ಬೆಳೆಯ ಬೀಜ ಬಿತ್ತನೆ ಕಾರ್ಯ ಚುರುಕುಗೊಳಿಸಿದ್ದಾರೆ. ಮಳೆಯ ಕಾರಣಕ್ಕೆ ಕುಂಠಿತಗೊಂಡಿದ್ದ ತೊಗರಿ, ಸೂರ್ಯಕಾಂತಿ, ಭತ್ತ ಹಾಗೂ ಸಜ್ಜೆ ಮರು ಬಿತ್ತನೆ ಆರಂಭಗೊಂಡಿದೆ. ಕೆಲವರು ಯಂತ್ರೋಪಕರಣಗಳಿಂದ ಹಾಗೂ ಅತಿ ಸಣ್ಣ ರೈತರು ಎತ್ತುಗಳಿಂದ ಬಿತ್ತನೆ ಕಾರ್ಯ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net