

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮಂಗಳವಾರ ಎರಡು ತಾಸಿಗೂ ಅಕ ಸಮಯ ಆಲಿಕಲ್ಲು, ಗುಡುಗು, ಸಿಡಿಲು ಸಹಿತ ಜೋರು ಮಳೆಯಾಯಿತು. ಮತ್ತೊಂದೆಡೆ ಮುಂಗಾರು ಪೂರ್ವ ಬಿತ್ತನೆಗೆ ಸಜ್ಜಾಗಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿತು.
ಬೆಳಗಾವಿ ನಗರ, ಗೋಕಾಕ, ಮೂಡಲಗಿ, ರಾಮದುರ್ಗ, ಸವದತ್ತಿ, ಬೈಲಹೊಂಗಲ, ಕಿತ್ತೂರು, ಹುಕ್ಕೇರಿ, ಚಿಕ್ಕೋಡಿ ಸೇರಿ ಮೊದಲಾದ ಕಡೆಗಳಲ್ಲಿ ಮಳೆ ಬಿದ್ದಿತು. ಮಳೆಯಿಂದಾಗಿ ಕೆರೆ, ಕಟ್ಟೆ, ಹಳ್ಳ-ಕೊಳ್ಳಗಳು ನೀರು ತುಂಬಿ ಹರಿದವು. ಕೆಲ ಭಾಗದಲ್ಲಿ ಗಾಳಿ ಸಹಿತ ಭಾರಿ ಮಳೆಯಿಂದ ಗಿಡಮರಗಳು, ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿ ಬಿದ್ದವು. ಆದರೆ, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಗ್ರಾಮೀಣ ಭಾಗದಲ್ಲಿ ಜೋರಾಗಿ ಸುರಿದ ಮಳೆಯಿಂದಾಗಿ ಒಣಗಿದ ಮರಗಳು, ಬಾಗಿ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿ ಬಿದ್ದಿವೆ. ಇನ್ನೂ ಕೆಲವು ಕಡೆ ಹಳೆ ಮನೆಗಳ ಗೋಡೆಗಳು ಕುಸಿದಿವೆ. ಇನ್ನೂ ನೀರಾವರಿ ಪ್ರದೇಶ, ನದಿ ದಡದ ಭಾಗಗಳಲ್ಲಿನ ನೀರಿನಲ್ಲದೆ ಬಾಡುತ್ತಿದ್ದ ಕಬ್ಬು, ಬಾಳೆ, ದ್ರಾಕ್ಷಿ ಬೆಳೆಗಳಿಗೆ ಅನುಕೂಲವಾಗಿದೆ. ಭೂಮಿ ಹದಗೊಳಿಸುತ್ತಿದ್ದ ರೈತರಿಗೆ ಮಂಗಳವಾರ ಸುರಿದ ಭಾರಿ ಮಳೆಯು ಮುಂಗಾರು ಭಿತ್ತನೆ ಆರಂಭಕ್ಕೆ ಮುನ್ಸೂಚನೆ ನೀಡಿದೆ.
ಬೆಳಗಾವಿ ಮಹಾನಗರದ ಉತ್ತರ ಭಾಗದಲ್ಲಿ ಭಾರಿ ಮಳೆಯಿಂದಾಗಿ ಗಾಂನಗರ, ಸಮರ್ಥ ನಗರ, ಹಳೆ ಪಿಬಿ ರಸ್ತೆ ಸೇರಿ ವಿವಿಧ ಭಾಗಗಳಲ್ಲಿ ಚರಂಡಿ ಬ್ಲಾಕ್ ಆಗಿ ರಸ್ತೆಗಳ ಮೇಲೆ ನೀರಿ ಹರಿಯಿತು. ಮಾರುಕಟ್ಟೆ ಪ್ರದೇಶಗಳಲ್ಲಿ ಮಳೆಯಿಂದಾಗಿ ವ್ಯಾಪಾರ ವಹಿವಾಟು ಸ್ಥಗಿತಗೊಂಡಿತು.