

ಬೀರೂರು: ಬಿಸಿಲಿನ ತಾಪಕ್ಕೆ ಬಳಲಿ ಬೆಂಡಾಗಿದ್ದ ಪಟ್ಟಣದ ನಾಗರಿಕರಿಗೆ ಸಂಜೆ ಸುರಿದ ಮಳೆ ನೆಮ್ಮದಿ ತಂದಿತು. ಮಾರ್ಚ್‌ನಿಂದ ಇಲ್ಲಿಯವರೆಗೂ ಒಂದೆರಡು ಬಾರಿ ಅಲ್ಪ ಪ್ರಮಾಣದ ಮಳೆಯಾಗಿದ್ದರಿಂದ ಬಿಸಿಲಿನ ಜಳ ಹೆಚ್ಚಾಗಿತ್ತು. ಕಳೆದ ವಾರ ಮಳೆಯ ಮುನ್ಸೂಚನೆ ಇತ್ತಾದರೂ ಗುಡುಗು ಮಿಂಚಿನ ಆರ್ಭಟಕ್ಕೆ ಮಾತ್ರ ಸೀಮಿತವಾಗಿತ್ತು. ಮಂಗಳವಾರ ಸಂಜೆ ಅರ್ಧ ತಾಸಿಗೂ ಹೆಚ್ಚಿನ ಮಳೆಯಾಗಿದೆ. ಈ ಮಳೆಯಿಂದ ಕೃಷಿ ಚಟುವಟಿಕೆಗೂ ಪೂರಕ ವಾತಾವರಣ ಸೃಷ್ಟಿಯಾಗಿದೆ.