ಮಳೆಗೆ ಹಾರಿಹೋದ ಮನೆಯ ಛಾವಣಿ

18 rmd 2-Web
ಮುದೇನೂರ ಗ್ರಾಮದಲ್ಲಿ ಮಳೆಯಿಂದ ಉಂಟಾದ ಹಾನಿಯನ್ನು ಶಾಸಕ ಮಹಾದೇವಪ್ಪ ಯಾದವಾಡ ಪರಿಶೀಲಿಸಿದರು. ಜಿಪಂ ಸದಸ್ಯ ರೇಣಪ್ಪ ಸೋಮಗೊಂಡ, ತಾಪಂ ಇಒ ಮುರಳೀಧರ ದೇಶಪಾಂಡೆ ಇತರರು ಇದ್ದರು.
Published on

ರಾಮದುರ್ಗ: ಶುಕ್ರವಾರ ಸಂಜೆ ಸುರಿದ ಭಾರಿ ಮಳೆ, ಗಾಳಿಯಿಂದ ತಾಲೂಕಿನ ಮುದೇನೂರ ಗ್ರಾಮದಲ್ಲಿ ಮನೆಯ ಮೇಲ್ಛಾವಣಿ ಹಾಗೂ ತಗಡುಗಳು ಹಾರಿಹೋಗಿವೆ. ಶಾಸಕ ಮಹಾದೇವಪ್ಪ ಯಾದವಾಡ ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಮನೆಯ ಛಾವಣಿ ಮತ್ತು ತಗಡುಗಳು ಹಾರಿಹೋಗಿರುವುದನ್ನು ಪರಿಶೀಲಿಸಿದರು.

ತಾಲೂಕಿನಲ್ಲಿ ಸುರಿದ ಮಳೆಯಿಂದ ಹಾನಿಯಾದ ಬಗ್ಗೆ ಸರ್ವೇ ಮಾಡಿ ಜಿಲ್ಲಾಧಿಕಾರಿಗೆ ತಿಳಿಸಲು ತಹಸೀಲ್ದಾರ್‌ಗೆ ಸೂಚಿಸಿದರು. ಅಲ್ಲದೆ ಪ್ರಕೃತಿ ವಿಕೋಪದ ಅಡಿ ಸೂಕ್ತ ಪರಿಹಾರ ನೀಡಲಾಗುವುದು ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು. ಜಿಪಂ ಸದಸ್ಯ ರೇಣಪ್ಪ ಸೋಮಗೊಂಡ, ತಾಪಂ ಇಒ ಮುರಳೀಧರ ದೇಶಪಾಂಡೆ, ಎಲ್.ಎಫ್. ಉಪ್ಪಾರ ಬಸಲಿಂಗಪ್ಪ ಹರಗುಟಗಿ, ಭೀಮಪ್ಪ ಕಿತ್ತೂರ, ಮಹೇಶ ಹಕಾಟಿ, ಉಮೇಶ ಹಕಾಟಿ, ಮಲ್ಲಪ್ಪ ಬಸಿಡೋಣಿ ಹಾಗೂ ಗ್ರಾಮದ ಮುಖಂಡರು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net