ರಾಗಿ ಕೊಯ್ಲಿಗೆ ಮಳೆ ಆತಂಕ, 4,100 ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆ

7 dpt 1 sompur hobliylli ragi bndiruvudu.
Published on

ಬರಗೇನಹಳ್ಳಿ ಚಿಕ್ಕರಾಜು ದಾಬಸ್‌ಪೇಟೆ

ಈ ವರ್ಷ ಸುರಿದ ಮಳೆಯಿಂದಾಗಿ ಉತ್ತಮ ರಾಗಿ ಬೆಳೆ ಕೊಯ್ಲಿಗೆ ಬಂದಿದೆಯಾದರೂ ಈ ಹಂತದಲ್ಲಿ ಮಳೆ ಮುಂದುವರಿಯುವ ಹವಾಮಾನ ಇಲಾಖೆ ಮನ್ಸೂಚನೆ ರೈತರಲ್ಲಿ ಆತಂಕ ಹುಟ್ಟಿಸಿದೆ.

ಕಳೆದ ಮೂರ್ನಾಲ್ಕು ವರ್ಷಗಳಿಂದ ನಿರಂತರವಾಗಿ ಮಳೆಯಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಕನಿಷ್ಠ ದನಕರುಗಳಿಗೆ ಮೇವೂ ಸಿಗದೆ ಸಂಕಷ್ಟ ಎದುರಾಗಿತ್ತು. ಇದರಿಂದಾಗಿ ಬೆಳೆ ಮೇಲಿನ ನಂಬಿಕೆಯನ್ನೇ ಕಳೆದುಕೊಂಡು ನಿರಾಸೆಗೊಂಡಿದ್ದರು.

ಆದರೆ ಈ ಬಾರಿ ಸೋಂಪುರ ಹೋಬಳಿಯಲ್ಲಿ ಒಟ್ಟು 4,100 ಹೆಕ್ಟೇರ್ ರಾಗಿ ಬಿತ್ತನೆಯಾಗಿದ್ದು, ಪ್ರಸ್ತುತ ಕಟಾವಿಗೆ ಬಂದಿದೆ. ಹಾಗಾಗಿ ವರುಣ ಮತ್ತೆ ವಕ್ಕರಿಸದಿದ್ದರೆ ತಿಂಗಳಲ್ಲಿ ರಾಗಿ ಬೆಳೆ ಮನೆ ಸೇರಲಿದೆ.

ಮಳೆ ಭೀತಿ: ದೀಪಾವಳಿ ಸಮಯಕ್ಕೆ ಸರಿಯಾಗಿ ರಾಗಿ ಬೆಳೆ ಕೊಯ್ಲಿಗೆ ಬರುತ್ತದೆ. ಇದೇ ವೇಳೆ ಚಿತ್ತ್ತಾ ಮತ್ತು ಸ್ವಾತಿ ಮಳೆಗಳು ಇದ್ದು, ಜಡಿ ಬರುವ ಆತಂಕ ಇರುವುದರಿಂದ, ಈ ಬಾರಿಯೂ ಕೈಗೆ ಬಂದ ಬೆಳೆ ಮನೆಗೆ ಬಾರದಂತೆ ಆಗುತ್ತದೆ ಎಂಬ ಆತಂಕ ಕಾಡುತ್ತಿದೆ.

ಈ ವರ್ಷ ನಮಗೆ ಬರಗಾಲವಿಲ್ಲ. ಕರೊನಾದಂಥ ಸಂಕಷ್ಟದಲ್ಲಿ ಭೂತಾಯಿ ನಮ್ಮ ಕೈ ಹಿಡಿದಿದ್ದಾಳೆ. ಉತ್ತಮವಾಗಿ ಬೆಳೆಯಾಗಿದ್ದು, ರಾಗಿ ಕಟಾವಿಗೆ ಬರುವ ಹಂತದಲ್ಲಿದೆ. ಕಟಾವು ಸಂದರ್ಭದಲ್ಲಿ ಮಳೆ ಆಗದಿದ್ದರೆ ಸಾಕು. ಮೋಹನ್, ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net