ಕರಾವಳಿಯಲ್ಲಿ ಮತ್ತೆ ಮಳೆ-ಮುಂದಿನ 2 ದಿನ ಯಲ್ಲೊ ಅಲರ್ಟ್

Published on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಭಾನುವಾರ ಮಿಶ್ರ ವಾತಾವರಣ ಕಂಡುಬಂದಿದೆ. ಹವಾಮಾನ ಇಲಾಖೆ ನೀಡಿದ ಯಲ್ಲೊ ಅಲರ್ಟ್ ಸೂಚನೆಯ ಹೊರತಾಗಿಯೂ ಬಿಸಿಲು ಸಹಿತ ಆಗಾಗ ಮಳೆಯ ಸಿಂಚನವಾಗಿದೆ. ಕರಾವಳಿಯಲ್ಲಿ ಮುಂದಿನ 2 ದಿನ ಯಲ್ಲೊ ಅಲರ್ಟ್‌ನು ಹವಾಮಾನ ಇಲಾಖೆ ಘೋಷಿಸಿದೆ.

ಭಾನುವಾರ ಬೆಳಗ್ಗೆ ಬಹುತೇಕ ಬಿಸಿಲಿನ ವಾತಾವರಣ ಇದ್ದು, ಮಧ್ಯಾಹ್ನ ಹಾಗೂ ಸಂಜೆ ಅಲ್ಲಲ್ಲಿ ಉತ್ತಮ ಮಳೆಯಾಗಿದೆ. ಗ್ರಾಮಾಂತರ ಬಾಗದಲ್ಲಿ ಬೆಳಗ್ಗಿನ ವೇಳೆ ಕೆಲಕಾಲ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಳೆಯಾಗಿದೆ. ಬಳಿಕ ದಿನವಿಡಿ ಬಿಸಿಲು ಆವರಿಸಿತ್ತು. ಆ.26 ರಿಂದ ಮುಂದಿನ 2 ದಿನಗಳ ಕಾಲ ಸಾಮಾನ್ಯ ಮಳೆಯಾಗುವ ಹಳದಿ ಅಲರ್ಟ್ ನೀಡಿದೆ. ಜಿಲ್ಲೆಯಲ್ಲಿ ಶನಿವಾರ ಬೆಳಗ್ಗಿನಿಂದ ಭಾನುವಾರ ಬೆಳಗ್ಗಿನವರೆಗೆ ಸರಾಸರಿ 6.1 ಮಿಮೀ ಮಳೆ ದಾಖಲಾಗಿದೆ. ಮಳೆಕಾಡು ಹಾಗೂ ಪಶ್ಚಿಮಘಟ್ಟದ ಹಲವಡೆ ಉತ್ತಮ ಮಳೆಯಾಗಿದ್ದು, ನೇತ್ರಾವತಿ ಹಾಗೂ ನೇತ್ರಾವತಿ ಉಪನದಿಗಳಲ್ಲಿ ನೀರಿನ ಮಟ್ಟ ತುಸು ಏರಿಕೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net