ಯಲ್ಲಾಪುರ ತಾಲೂಕಲ್ಲಿ ಬಿರು ಗಾಳಿ ಸಹಿತ ಮಳೆ

YLP RAIN
Published on

ಯಲ್ಲಾಪುರ: ಪಟ್ಟಣ ಸೇರಿ ತಾಲೂಕಿನ ವಿವಿಧೆಡೆ ಶುಕ್ರವಾರ ಮಧ್ಯಾಹ್ನ ಗಾಳಿ ಸಹಿತ ಮಳೆಯಾಗಿದೆ.

ತಾಲೂಕಿನ ಇಡಗುಂದಿ, ತೇಲಂಗಾರ, ವಜ್ರಳ್ಳಿ, ಕಳಚೆ ಭಾಗದಲ್ಲಿ ಜೋರಾದ ಗಾಳಿಯೊಂದಿಗೆ ಭಾರಿ ಮಳೆಯಾಗಿದೆ.

ಯಲ್ಲಾಪುರ ಪಟ್ಟಣ, ನಂದೊಳ್ಳಿ, ಮಾಗೋಡ ಭಾಗದಲ್ಲಿ ತುಂತುರು ಮಳೆಯಾಗಿದೆ. ಅಕಾಲಿಕವಾಗಿ ಬಂದ ಈ ಮಳೆಯಿಂದ ಅಡಕೆ ಬೆಳೆಗಾರರು ಕಂಗಾಲಾಗುವಂತಾಗಿದೆ.

ಒಣಗಲು ಹಾಕಿದ ಅಡಕೆ ಮಳೆಯಲ್ಲಿ ನೆನೆದು ನಷ್ಟ ಉಂಟಾಗುವ ಭಯದಲ್ಲಿ ಬೆಳೆಗಾರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net