

ಮಡಿಕೇರಿ:
ಜಿಲ್ಲೆಯಾದ್ಯಂತ ಬುಧವಾರ ರಾತ್ರಿಯಿಂದ ಸಾಧಾರಣ ಮಳೆ ಆಗಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ದಿನಪೂರ್ತಿ ಮಳೆಯ ವಾತಾವರಣ ಇತ್ತು.
ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 17.47 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 39.92 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 2235.59 ಮಿ.ಮೀ. ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 2383.19 ಮಿ.ಮೀ ಮಳೆಯಾಗಿತ್ತು.
ಮಡಿಕೇರಿ ತಾಲೂಕಿನಲ್ಲಿ 32.28 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ 15 ಮಿ.ಮೀ., ಪೊನ್ನಂಪೇಟೆ ತಾಲೂಕಿನಲ್ಲಿ 10.68 ಮಿ.ಮೀ. ಸೋಮವಾರಪೇಟೆ ತಾಲೂಕಿನಲ್ಲಿ 15.30 ಮಿ.ಮೀ. ಹಾಗೂ ಕುಶಾಲನಗರ ತಾಲೂಕಿನಲ್ಲಿ 14.10 ಮಿ.ಮೀ. ಸರಾಸರಿ ಮಳೆಯಾಗಿದೆ.
ಮಡಿಕೇರಿ ಕಸಬಾ 21.50, ನಾಪೋಕ್ಲು 23.20, ಸಂಪಾಜೆ 43, ಭಾಗಮಂಡಲ 41.40, ವಿರಾಜಪೇಟೆ 17, ಅಮ್ಮತ್ತಿ 13, ಹುದಿಕೇರಿ 18.30, ಶ್ರೀಮಂಗಲ 9.40, ಪೊನ್ನಂಪೇಟೆ 6, ಬಾಳೆಲೆ 9, ಸೋಮವಾರಪೇಟೆ 15.40, ಶನಿವಾರಸಂತೆ 6, ಶಾಂತಳ್ಳಿ 30, ಕೊಡ್ಲಿಪೇಟೆ 9.80, ಕುಶಾಲನಗರ 8.20 ಹಾಗೂ ಸುಂಟಿಕೊಪ್ಪ ಹೋಬಳಿಯಲ್ಲಿ 20 ಮಿ.ಮೀ. ಮಳೆಯಾಗಿದೆ.
2859 ಅಡಿ ಎತ್ತರದ ಹಾರಂಗಿ ಜಲಾಶಯದಲ್ಲಿ ಗುರುವಾರದ ಮಾಹಿತಿ ಪ್ರಕಾರ 2856.85 ಅಡಿ ನೀರಿದೆ. ನೀರಿನ ಒಳಹರಿವು 3818 ಕ್ಯೂಸೆಕ್ ಆಗಿದ್ದು, ನದಿಗೆ 1,100 ಕ್ಯೂಸೆಕ್ ಮತ್ತು ನಾಲೆಗೆ 500 ಕ್ಯೂಸೆಕ್ ನೀರು ಬಿಡಲಾಗುತ್ತಿದೆ.
ಮತ್ತೊಂದೆಡೆ ಮಳೆಯಿಂದಾಗಿ ರಾಷ್ಟಿçÃಯ ಹೆದ್ದಾರಿ 275ರ ಜೋಡುಪಾಲ ಬಳಿ ರಸ್ತೆ ಬದಿ ಮಣ್ಣು ಜರಿಯುತ್ತಿದ್ದು, ಸ್ಥಳಕ್ಕೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ವಿಭಾಗದ ಎಂಜಿನಿಯರ್‌ಗಳು ಇತರರು