

ಮಡಿಕೇರಿ:
ಜಿಲ್ಲೆಯಲ್ಲಿ ಮಳೆಯ ಅಬ್ಬರ ಕಡಿಮೆ ಆಗಿದೆ. ಆದರೆ ಸಾಧಾರಣ ಮಳೆ ಮಂಗಳವಾರ ಕೊಡಗಿನಾದ್ಯಂತ ಕಂಡು ಬಂತು. ಗಾಳಿಯೂ ವೇಗವಾಗಿ ಬೀಸುತ್ತಿತ್ತು. ಮಡಿಕೇರಿಯಲ್ಲಿ ಮಳೆ, ಮಂಜು ಮುಸುಕಿದ ವಾತಾವರಣ ಕಂಡು ಬಂತು. ನದಿಗಳಲ್ಲಿ ನೀರಿನ ಪ್ರಮಾಣ ನಿಧಾನಕ್ಕೆ ಇಳಿಮುಖ ಆಗುತ್ತಿದೆ.
ಜಿಲ್ಲೆಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 9.56 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 46.68 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆೆ 2099.46 ಮಿ.ಮೀ. ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 1996.15 ಮಿ.ಮೀ ಮಳೆಯಾಗಿತ್ತು.
ಮಡಿಕೇರಿ ತಾಲೂಕಿನಲ್ಲಿ 20.18 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ 3.75 ಮಿ.ಮೀ., ಪೊನ್ನಂಪೇಟೆ ತಾಲೂಕಿನಲ್ಲಿ 1.95 ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ11.20 ಮಿ.ಮೀ. ಹಾಗೂ ಕುಶಾಲನಗರ ತಾಲೂಕಿನಲ್ಲಿ 10.70 ಮಿ.ಮೀ. ಮಳೆಯಾಗಿದೆ.
ಮಡಿಕೇರಿ ಕಸಬಾ 39, ನಾಪೋಕ್ಲು 9.20, ಸಂಪಾಜೆ 16.50, ಭಾಗಮಂಡಲ 16, ವಿರಾಜಪೇಟೆ 3, ಅಮ್ಮತ್ತಿ 4.50, ಹುದಿಕೇರಿ 1.80, ಶ್ರೀಮಂಗಲ 2, ಪೊನ್ನಂಪೇಟೆ 2, ಬಾಳೆಲೆ 2.01, ಸೋಮವಾರಪೇಟೆ 13.20, ಶನಿವಾರಸಂತೆ 6, ಶಾಂತಳ್ಳಿ 18, ಕೊಡ್ಲಿಪೇಟೆ 7.60, ಕುಶಾಲನಗರ 12.40 ಹಾಗೂ ಸುಂಟಿಕೊಪ್ಪ ಹೋಬಳಿಯಲ್ಲಿ 9 ಮಿ.ಮೀ. ಮಳೆ ದಾಖಲಾಗಿದೆ.
2859 ಅಡಿ ಎತ್ತರದ ಹಾರಂಗಿ ಜಲಾಶಯದಲ್ಲಿ ಮಂಗಳವಾರದ ಮಾಹಿತಿ ಪ್ರಕಾರ 2853.95 ಅಡಿ ನೀರಿದೆ. ಕಳೆದ ವರ್ಷ ಇದೇ ದಿನ 2855.85 ಅಡಿ ನೀರಿತ್ತು. ನೀರಿನ ಒಳಹರಿವು 6416 ಕ್ಯೂಸೆಕ್ ಇದ್ದು, ನದಿಗೆ 5166 ಕ್ಯೂಸೆಕ್ ಮತ್ತು ನಾಲೆಗೆ 350 ಕ್ಯೂಸೆಕ್ ನೀರು ಬಿಡಲಾಗುತ್ತಿದೆ.