

ಮಡಿಕೇರಿ:
ಕಳೆದ 3-4 ದಿನಗಳಿಂದ ಜಿಲ್ಲೆಯಾದ್ಯಂತ ಅಬ್ಬರ ತೋರಿಸಿದ್ದ ಪುಷ್ಯ ಮಳೆ ಸೋಮವಾರ ಸ್ವಲ್ಪ ರಭಸ ಕಳೆದುಕೊಂಡAತೆ ಕಂಡುಬAತು.
ಆದರೆ ಗಾಳಿಯ ಆರ್ಭಟ ಮಾತ್ರ ಮುಂದುವರಿದಿತ್ತು. ಚಳಿಯ ವಾತಾವರಣವೂ ಇತ್ತು. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಸಾಧಾರಣ ಮಳೆ ಇತ್ತು. ಅಪರೂಪಕ್ಕೆ ಆಗಾಗ್ಗೆ ಎಳೆ ಬಿಸಿಲಿನ ದರ್ಶನವೂ ಆಯಿತು.
ಜಿಲ್ಲೆಯ ಅಲ್ಲಲ್ಲಿ ಮಳೆ ಹಾನಿ ಮುಂದುವರಿದಿದೆ. ಕೆಲವು ಕಡೆಗಳಲ್ಲಿ ನದಿ ನೀರು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ನಾಪೋಕ್ಲು ಹೋಬಳಿ ನಾಪೋಕ್ಲು ಗ್ರಾಮದ ಕುಲ್ಲೆಟ್ಟಿರ ಚಂಗಪ್ಪ ಎಂಬವರ ಮನೆ ಗಾಳಿ ಮಳೆಯಿಂದ ತೀವ್ರ ಹಾನಿಗೊಳಗಾಗಿದೆ. ಕುಶಾಲನಗರ ತಾಲೂಕು ಕೂಡಿಗೆ ಮತ್ತು ಕಣಿವೆ ಮಧ್ಯೆ ಹತ್ತಾರು ಎಕರೆ ಭತ್ತದ ಜಮೀನು ಕಾವೇರಿ ನದಿಯ ಪ್ರವಾಹದಲ್ಲಿ ಮುಳುಗಿದೆ.
ಕಳೆದ 24 ಗಂಟೆ ಅವಧಿಯಲ್ಲಿ ಕೊಡಗಿನಲ್ಲಿ ಸರಾಸರಿ 13.86 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 5.33 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ ಮಳೆ 2089.90 ಮಿ.ಮೀ. ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 1949.47 ಮಿ.ಮೀ. ಮಳೆಯಾಗಿತ್ತು.
ಮಡಿಕೇರಿ ತಾಲೂಕಿನಲ್ಲಿ 14.88 ಮಿ.ಮೀ. ವಿರಾಜಪೇಟೆ ತಾಲೂಕಿನಲ್ಲಿ 5.75 ಮಿ.ಮೀ., ಪೊನ್ನಂಪೇಟೆ ತಾಲೂಕಿನಲ್ಲಿ 9.90 ಮಿ.ಮೀ.,
ಸೋಮವಾರಪೇಟೆ ತಾಲೂಕಿನಲ್ಲಿ 28.95 ಮಿ.ಮೀ. ಹಾಗೂ ಕುಶಾಲನಗರ ತಾಲೂಕಿನಲ್ಲಿ 9.80 ಮಿ.ಮೀ. ಮಳೆಯಾಗಿದೆ.
ಮಡಿಕೇರಿ ಕಸಬಾ 14, ನಾಪೋಕ್ಲು 7.20, ಸಂಪಾಜೆ 16.50, ಭಾಗಮಂಡಲ 21.80, ವಿರಾಜಪೇಟೆ 7, ಅಮ್ಮತ್ತಿ 4.50, ಹುದಿಕೇರಿ 11.40, ಶ್ರೀಮಂಗಲ 16.20, ಪೊನ್ನಂಪೇಟೆ 5, ಬಾಳೆಲೆ 7, ಸೋಮವಾರಪೇಟೆ 19, ಶನಿವಾರಸಂತೆ 38, ಶಾಂತಳ್ಳಿ 45, ಕೊಡ್ಲಿಪೇಟೆ 13.80, ಕುಶಾಲನಗರ 8.60 ಹಾಗೂ ಸುಂಟಿಕೊಪ್ಪ ಹೋಬಳಿಯಲ್ಲಿ 11 ಮಿ.ಮೀ. ಮಳೆ ದಾಖಲಾಗಿದೆ.
2859 ಅಡಿ ಎತ್ತರದ ಹಾರಂಗಿ ಜಲಾಶಯದಲ್ಲಿ ಸೋಮವಾರದ ಮಾಹಿತಿ ಪ್ರಕಾರ 2853.61 ಅಡಿ ನೀರಿದೆ. ನೀರಿನ ಒಳಹರಿವು 10,107 ಕ್ಯೂಸೆಕ್ ಇದ್ದು ನದಿಗೆ 14,458 ಕ್ಯುಸೆಕ್ ಮತ್ತು ನಾಲೆಗೆ 350 ಕ್ಯೂಸೆಕ್ ನೀರು ಬಿಡಲಾಗುತ್ತಿದೆ.