ಜಿಲ್ಲೆಯಲ್ಲಿ ಮುಂದುವರಿದ ಸಾಧಾರಣ ಮಳೆ

rain
Published on

ಮಡಿಕೇರಿ:

ಜಿಲ್ಲೆಯಲ್ಲಿ ಶುಕ್ರವಾರವೂ ಸಾಧಾರಣ ಮಳೆ ಮುಂದುವರಿದಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಆಗಾಗ್ಗೆ ಬಿಡುವು ತೆಗೆದುಕೊಂಡು ಮಳೆ ಸುರಿಯುತ್ತಿತ್ತು. ಕೆಲವೊಮ್ಮೆ ಜೋರು ಗಾಳಿಯ ಅನುಭವವೂ ಆಗುತ್ತಿತ್ತು. ಮಂಜುಮುಸುಕಿದ ವಾತಾವರಣದೊಂದಿಗೆ ಚಳಿಯೂ ಇತ್ತು. ಭಾರತೀಯ ಹವಾಮಾನ ಇಲಾಖೆಯ ಜು.5ರಿಂದ ಜು.9ರ ತನಕದ ಹವಾಮಾನ ಮುನ್ಸೂಚನೆ ಪ್ರಕಾರ ಮೋಡ ಕವಿದ ವಾತಾವರಣ ಇರಲಿದ್ದು, ಜೋರು ಗಾಳಿ ಮತ್ತು ಭಾರಿ ಮಳೆ ಆಗಲಿದೆ.

ಕಳೆದ 24 ಗಂಟೆ ಅವಧಿಯಲ್ಲಿ ಕೊಡಗಿನಲ್ಲಿ ಸರಾಸರಿ 18.64 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 51.41 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 1505.38 ಮಿ.ಮೀ. ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 945.01 ಮಿ.ಮೀ. ಮಳೆಯಾಗಿತ್ತು.

ಮಡಿಕೇರಿ ತಾಲೂಕಿನಲ್ಲಿ 27.65 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ 11.35 ಮಿ.ಮೀ., ಪೊನ್ನಂಪೇಟೆ ತಾಲೂಕಿನಲ್ಲಿ 14.62 ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ 31.70 ಮಿ.ಮೀ. ಹಾಗೂ ಕುಶಾಲನಗರ ತಾಲೂಕಿನಲ್ಲಿ 7.90 ಮಿ.ಮೀ. ಸರಾಸರಿ ಮಳೆಯಾಗಿದೆ.

ಮಡಿಕೇರಿ ಕಸಬಾ 30.50, ನಾಪೋಕ್ಲು 11, ಸಂಪಾಜೆ 34.50, ಭಾಗಮಂಡಲ 34.60, ವಿರಾಜಪೇಟೆ 10.20, ಅಮ್ಮತ್ತಿ 12.50, ಹುದಿಕೇರಿ 20.30, ಶ್ರೀಮಂಗಲ 19, ಪೊನ್ನಂಪೇಟೆ 9, ಬಾಳೆಲೆ 10.20, ಸೋಮವಾರಪೇಟೆ 23, ಶನಿವಾರಸಂತೆ 30, ಶಾಂತಳ್ಳಿ 59, ಕೊಡ್ಲಿಪೇಟೆ 14.80, ಕುಶಾಲನಗರ 1.60 ಹಾಗೂ ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ 14.20 ಮಿ.ಮೀ.ಮಳೆಯಾಗಿದೆ.

2859 ಅಡಿ ಎತ್ತರದ ಹಾರಂಗಿ ಜಲಾಶಯದಲ್ಲಿ ಶುಕ್ರವಾರದ ಮಾಹಿತಿ ಪ್ರಕಾರ 2852.13 ಅಡಿ ನೀರಿದೆ. 6000 ಕ್ಯೂಸೆಕ್ ನೀರಿನ ಒಳಹರಿವು ಇದ್ದು, ನದಿಗೆ 8166 ಕ್ಯೂಸೆೆಕ್ ನೀರು ಬಿಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net