ಪ್ರಾಣ ಹಾನಿಯಾಗದಂತೆ ಮುನ್ನೆಚ್ಚರಿಕೆ - ಅಧಿಕಾರಿಗಳ ತುರ್ತು ಸಭೆಯಲ್ಲಿ ತಹಸೀಲ್ದಾರ್ ಸೂಚನೆ

PTR_11 JUN_2
Published on

ಪುತ್ತೂರು: ಮಳೆಯ ಪ್ರಮಾಣ ಹೆಚ್ಚಾಗಲಿದ್ದು, ಜೂನ್ ೧೩, ೧೪ರಂದು ರೆಡ್ ಅಲರ್ಟ್ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳ ತುರ್ತು ಸಭೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.

ಪ್ರಭಾರ ತಹಸೀಲ್ದಾರ್ ನಾಗರಾಜ್ ಮಾತನಾಡಿ, ತಾಲೂಕಿನಲ್ಲಿ ಮಳೆಯಿಂದ ಹಾನಿಯಾಗುವ ಸ್ಥಳಗಳನ್ನು ಗುರುತಿಸಿ, ಕೃತಕ ನೆರೆಯಾಗುವ ಸ್ಥಳಗಳಿಗೆ ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದ ತಂಡಗಳು ಖುದ್ದಾಗಿ ತೆರಳಿ ಮಾಹಿತಿ ಪಡೆಯಬೇಕು. ಜಿಪಿಎಸ್ ಆಧಾರಿತ ಫೊಟೋ ತೆಗೆಯಬೇಕು. ಪ್ರಾಕೃತಿಕ ವಿಕೋಪ ಪಡೆಯ ಆಪ್‌ಗೆ ದಾಖಲಿಸಬೇಕು. ಯಾವುದೇ ಪ್ರಾಣ ಹಾನಿಯಾಗದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದರು.

ತಾಪಂ ಇಒ ನವೀನ್ ಕುಮಾರ್ ಭಂಡಾರಿ ಮಾತನಾಡಿ, ಕಳೆದ ಬಾರಿಗಿಂತ ಹೆಚ್ಚಿನ ಮಳೆಯಾಗುವ ಸೂಚನೆಯಿದ್ದು, ಯಾರು, ಯಾಕೆ ಮಾಡಿದ್ದು ಎಂದು ಸಮಯ ವ್ಯರ್ಥ ಮಾಡುವುದು ಬಿಟ್ಟು ಪ್ರಾಣ ಹಾನಿ ಆಗದಂತೆ ಕಾರ್ಯನಿರ್ವಹಿಸಬೇಕು. ಮನೆ ಅಪಾಯದಲ್ಲಿದ್ದರೆ ಮನೆ ಮಂದಿಯನ್ನು ಸ್ಥಳಾಂತರಗೊಳಿಸುವ ಕುರಿತು ಮಾಹಿತಿ ಅಥವಾ ನೋಟಿಸ್ ನೀಡಬೇಕು. ಸ್ಥಳಾಂತರ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದರು.

ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಮಕರಣಿಕರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net