ಕೊಡಗಿನಲ್ಲಿ ಅಬ್ಬರಿಸುತ್ತಿರುವ ಮಳೆರಾಯ

rain
Published on

ಮಡಿಕೇರಿ:

ಜಿಲ್ಲೆಯ ಹಲವೆಡೆ ಶುಕ್ರವಾರ ರಾತ್ರಿಯಿಂದ ಈಚೆಗೆ ಭಾರಿ ಮಳೆ ಆಗುತ್ತಿದೆ. ಕಾವೇರಿ ಉಗಮ ಸ್ಥಾನ ತಲಕಾವೇರಿ, ತ್ರಿವೇಣಿ ಸಂಗಮ ಕ್ಷೇತ್ರ ಭಾಗಮಂಡಲ ವ್ಯಾಪ್ತಿಯ ಪ್ರದೇಶಗಳಲ್ಲಿ ಸುರಿಯುತ್ತಿರುವ ಮಳೆಗೆ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರುಗತಿಯಲ್ಲಿದೆ. ಈ ಮಧ್ಯೆ ಜಿಲ್ಲೆಯಲ್ಲಿ ಶನಿವಾರ ಮತ್ತು ಭಾನುವಾರ ರೆಡ್ ಅಲರ್ಟ್ ಘೋಷಣೆ ಮಾಡಿ ಹವಾಮಾನ ಇಲಾಖೆ ಪ್ರಕಟಣೆ ಹೊರಡಿಸಿದೆ.

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಮೇ 24ರಿಂದ ಮೇ 28ರ ತನಕ ಕೊಡಗಿನಲ್ಲಿ ಮೋಡ ಕವಿದ ವಾತಾವರಣವಿದ್ದು ಸಾಧಾರಣದಿಂದ ಭಾರಿ ಮಳೆ ಬರಲಿದೆ. ಮಳೆ ಜಾಸ್ತಿ ಆಗುತ್ತಿದ್ದಂತೆಯೇ ತಾಪಮಾನದಲ್ಲೂ ಇಳಿಕೆ ಕಂಡು ಬರುತ್ತಿದ್ದು, ಚಳಿಯ ವಾತಾವರಣ ನಿರ್ಮಾಣ ಆಗಿದೆ. ಗರಿಷ್ಠ ಉಷ್ಣಾಂಶ 25 -26 ಡಿ.ಸೆ. ದಾಖಲಾದರೆ ಕನಿಷ್ಠ ಉಷ್ಣಾಂಶ 20.2-21 ಡಿ.ಸೆ. ತನಕ ಕಂಡುಬರುತ್ತಿದೆ.

ಕಳೆದ 24 ಗಂಟೆಯಲ್ಲಿ ಕೊಡಗಿನಲ್ಲ ಒಟ್ಟು 27.39 ಮಿಮೀ ಮಳೆ ದಾಖಲಾಗಿದೆ. ಅತೀ ಹೆಚ್ಚು ಮಳೆ ಅಂದರೆ 102 ಮಿಮೀ. ಭಾಗಮಂಡಲದಲ್ಲಿ ಸುರಿದಿದೆ. ಉದರಂತೆ ಮಡಿಕೇರಿ ತಾಲೂಕು 43.73 ಮಿಮೀ, ವಿರಾಜಪೇಟೆ ತಾಲೂಕು 38.5 ಮಿಮೀ, ಪೊನ್ನಂಪೇಟೆ ತಾಲೂಕು 24 ಮಿಮೀ, ಸೋಮವಾರಪೇಟೆ ತಾಲೂಕು 17.3 ಮಿಮೀ ಹಾಗೂ ಕುಶಾಲನಗರ ತಾಲೂಕಿನಲ್ಲಿ 13.5 ಮಿಮೀ ಮಳೆ ಬಂದಿದೆ.

2859 ಅಡಿ ಎತ್ತರದ ಹಾರಂಗಿ ಅಣೆಕಟ್ಟೆಯಲ್ಲಿ ಪ್ರಸ್ತುತ 2832.11 ಅಡಿಗಳಷ್ಟು ನೀರಿದ್ದು, 177 ಕ್ಯೂಸೆಕ್ಸ್ ನೀರಿನ ಒಳಹರಿವು ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net