ನೆಲ್ಯಾಡಿಯಲ್ಲಿ ಗುಡ್ಡೆ ಕುಸಿತ : ಕರ್ಬಸಂಕದಲ್ಲಿ ನೀರು ನಿಂತು ಸವಾರರಿಗೆ ಅಪಾಯ

karba sanka
ಕರ್ಬಸಂಕದ ಮೇಲೆ ಅಪಾಯ ಮಟ್ಟದಲ್ಲಿ ನೀರು ನಿಂತಿರುವುದು.
Published on

ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪದ ಕರ್ಬಸಂಕ ಎಂಬಲ್ಲಿ ಭಾರಿ ಮಳೆಗೆ ಗುಡ್ಡಜರಿದು ರಸ್ತೆಗೆ ಮಣ್ಣು ಬಿದ್ದಿದೆ. ಚತುಷ್ಪಥ ರಸ್ತೆಯ ಕಾಮಗಾರಿ ಈ ಭಾಗದಲ್ಲಿ ನಡೆಯುತ್ತಿದ್ದು, ಸಂಚಾರಕ್ಕೆ ತೊಂದರೆ ಇಲ್ಲ ಎಂದಾದರೂ ರಸ್ತೆಯ ಬದಿಯಲ್ಲಿ ಕಟ್ಟಿರುವ ತಡೆಗೋಡೆಗೆ ಹಾನಿಯಾಗಿದೆ. ಕರ್ಬಸಂಕ ಎಂಬಲ್ಲಿ ಭಾರಿ ಪ್ರಮಾಣದಲ್ಲಿ ರಸ್ತೆಯ ಮೇಲೆ ನೀರು ನಿಂತಿದ್ದು ವಾಹನ ಸವಾರರಿಗೆ ಅಪಾಯದ ಭೀತಿ ಉಂಟುಮಾಡಿದೆ. ಚತುಷ್ಪಥ ಕಾಮಗಾರಿ ಈ ಭಾಗದಲ್ಲಿ ನಿಧಾನಗತಿಯಲ್ಲಿ ಸಾಗುತ್ತಿದ್ದು ಪ್ರಯಾಣಿಕರಿಗೆ ನುಂಗಲಾರದ ತುತ್ತಿನಂತೆ ಪರಿಣಮಿಸಿದೆ.

ನೆಲ್ಯಾಡಿಯ ಕರ್ಬಸಂಕ ಸಮೀಪದಲ್ಲಿ ಗುಡ್ಡಜರಿದು ರಸ್ತೆಯ ಮೇಲೆ ಬಿದ್ದಿರುವುದು.
ನೆಲ್ಯಾಡಿಯ ಕರ್ಬಸಂಕ ಸಮೀಪದಲ್ಲಿ ಗುಡ್ಡಜರಿದು ರಸ್ತೆಯ ಮೇಲೆ ಬಿದ್ದಿರುವುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net