ರೈಲ್ವೆ ಯೋಜನೆಗಳಿಗೆ ಅನುದಾನ

mp
Published on

ಕೊಪ್ಪಳ: ಹುಲಿಗಿ ರೈಲ್ವೆ ಸೇತುವೆಗೆ ಭೂ ಸ್ವಾಧೀನಕ್ಕೆ 3ಕೋಟಿ ರೂ. ಮಂಜೂರಾಗಿದ್ದು, ಕಾಮಗಾರಿಗೆ 29.57ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದು ಸಂಸದ ಸಂಗಣ್ಣ ಕರಡಿ ತಿಳಿಸಿದ್ದಾರೆ.

ಕಾಮಗಾರಿಯಲ್ಲಿ ರಾಜ್ಯದ ಪಾಲಿದೆ. ಆದರೆ, ರಾಜ್ಯ ಸರ್ಕಾರ ನಿರಾಸಕ್ತಿ ವಹಿಸಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಹಿನ್ನೆಡೆಯಾಗಿದೆ. ಕಾಮಗಾರಿ ನನೆಗುದಿಗೆ ಬೀಳದಿರಲಿ ಎಂದು ಕೇಂದ್ರವೇ ಅನುದಾನ ನೀಡಿದೆ. ಕಳೆದ 9 ವರ್ಷದಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ರೈಲ್ವೆ ಯೋಜನೆಗಳು ಅಭಿವೃದ್ಧಿಯಾಗಿವೆ. ನಾನು ಸಂಸದನಾಗುವ ಮೊದಲು ಕ್ಷೇತ್ರದಲ್ಲಿ ಕೇವಲ ಒಂದು ತಾಲೂಕಿಗೆ ರೈಲ್ವೆ ಸಂಪರ್ಕವಿತ್ತು. ಸದ್ಯ ಆರು ತಾಲೂಕುಗಳಿಗೆ ರೈಲ್ವೆ ಸಂಪರ್ಕ ಕಲ್ಪಿಸಲಾಗಿದೆ. ಶೀಘ್ರದಲ್ಲೇ ಸಿಂಧನೂರಿಗೆ ರೈಲು ಸಂಚಾರ ಆರಂಭವಾಗಲಿದೆ. ಕಾಂಗ್ರೆಸ್ ಕೇವಲ ಹೊಸ ಯೋಜನೆಗಳನ್ನು ರೂಪಿಸಿದೆ. ಆದರೆ, ಕಾಮಗಾರಿ ಪೂರ್ಣಗೊಳಿಸಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಮೊದಲು ಘೋಷಣೆಯಾದ ಯೋಜನೆಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡಿದ್ದಾರೆ. ದೇಶದಲ್ಲಿ ಡಿಜಿಟಲ್ ವ್ಯವಹಾರ ಜಾರಿಗೊಳಿಸಿದಾಗ ಕಾಂಗ್ರೆಸ್ ನಾಯಕರು ವ್ಯಂಗ್ಯವಾಡಿದ್ದರು. ಈಗ ಶೇ.47ರಷ್ಟು ಭಾರತೀಯರು ಡಿಜಿಟಲ್ ವ್ಯವಹಾರದಲ್ಲಿ ತೊಡಗಿದ್ದಾರೆ. ದೇಶದ ಆರ್ಥಿಕತೆ ವಿಶ್ವದಲ್ಲಿ ಮೂರನೇ ಸ್ಥಾನಕ್ಕೆ ಬಂದಿದೆ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಜಿಲ್ಲೆಯಲ್ಲಿ ರೈಲ್ವೆ ರಂಗ ಅಭಿವೃದ್ಧಿ ಕಂಡಿದೆ. ತಾಲೂಕು ಕೇಂದ್ರಗಳಿಗೆ ರೈಲು ಮಾರ್ಗ, ರೈಲ್ವೆ ನಿಲ್ದಾಣ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ ನನೆಗುದಿಗೆ ಬಿದ್ದಿದ್ದ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಿದೆ.

ಸಂಗಣ್ಣ ಕರಡಿ ಕೊಪ್ಪಳ ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net