

ಹುಬ್ಬಳ್ಳಿ : ರೈಲ್ವೆ ಯೂನಿಯನ್ಗೆ ಬುಧವಾರ ದೇಶದಾದ್ಯಂತ ಮತದಾನ ಪ್ರಾರಂಭಗೊಂಡಿದ್ದು, ನೈಋತ್ಯ ರೈಲ್ವೆ ವಲಯದ ವ್ಯಾಪ್ತಿಯಲ್ಲಿ ಮೊದಲ ದಿನವಾದ ಬುಧವಾರದಂದು ಶೇ. 53.35ರಷ್ಟು ಮತದಾನವಾಗಿದೆ.
ರೈಲ್ವೆ ಯೂನಿಯನ್ ಚುನಾವಣೆಗೆ ಡಿ. 4 ಮತ್ತು 5ರಂದು ಮತದಾನ ನಡೆಯಲಿದ್ದು, 6 ರಂದು ರನ್ನಿಂಗ್ ಸ್ಟಾಫ್(ಲೋಕೋಪೈಲಟ್ ಹಾಗೂ ಗಾರ್ಡ್ಸ್) ಮಾತ್ರ ಮತದಾನ ಮಾಡಲಿದ್ದಾರೆ. ಡಿ. 12ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.
ರೈಲ್ವೆ ನೌಕರರು ಬೆಳಗ್ಗೆಯಿಂದಲೇ ಮತಗಟ್ಟೆ ಬಳಿ ಸರದಿಯಲ್ಲಿ ನಿಂತು ಮತದಾನ ಮಾಡಿದರು.
ಗ್ರುಪ್ ಎ, ಬಿ ಹಾಗೂ ಆರ್ಪಿಎಫ್ ಸಿಬ್ಬಂದಿಗೆ ಮತದಾನಕ್ಕೆ ಅವಕಾಶ ಇಲ್ಲ.
ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಒಟ್ಟು 36,935 ಮತದಾರರು ಇದ್ದಾರೆ. ಮತದಾನದ ಮೊದಲ ದಿನವಾದ ಬುಧವಾರದಂದು ನೈಋತ್ಯ ರೈಲ್ವೆಯ 19,706 ನೌಕರರು ಮತದಾನ ಮಾಡಿದ್ದಾರೆ. ಹೆಡ್ಕ್ವಾರ್ಟರ್ನ 923ರಲ್ಲಿ 607 ಮತದಾರರು ಹಕ್ಕು ಚಲಾಯಿಸಿದ್ದಾರೆ (ಶೇ. 65.76). ಹುಬ್ಬಳ್ಳಿ ವಿಭಾಗದ 12,759 ಮತದಾರರಲ್ಲಿ 6,518 (ಶೇ.51.09) ಜನ ಮತದಾನ ಮಾಡಿದ್ದರೆ, ಬೆಂಗಳೂರು ವಿಭಾಗದ ಒಟ್ಟು 11,461 ಮತದಾರರಲ್ಲಿ 6,137(ಶೇ. 53.55)ಮತದಾರರು; ಮೈಸೂರು ವಿಭಾಗದ 7,027ರಲ್ಲಿ 3,552 (ಶೇ. 50.55) ನೌಕರರು ಮತ ಚಲಾಯಿಸಿದ್ದಾರೆ.
ಹುಬ್ಬಳ್ಳಿ ವರ್ಕ್ಶಾಪ್ನ 2,886ರಲ್ಲಿ 1,949 (ಶೇ. 67.53) ನೌಕರರು, ಮೈಸೂರು ವರ್ಕ್ಶಾಪ್ನ 1,580ರಲ್ಲಿ 774 (ಶೇ. 48.99); ಬೆಂಗಳೂರು ಕಂಟೋನ್ಮೆಂಟ್ನ 299 ಮತದಾರರಲ್ಲಿ 169 (ಶೇ. 56.52) ಜನ ಮತದಾನ ಮಾಡಿದ್ದಾರೆ.
ಸೌಥ್ ವೆಸ್ಟರ್ನ್ ರೈಲ್ವೆ ಎಂಪ್ಲಾಯೀಸ್ ಸಂಘ, ಬಿಎಂಎಸ್ನ ನೈಋತ್ಯ ರೈಲ್ವೆ ಮಜ್ದೂರ ಸಂಘ, ಸೌಥ್ ವೆಸ್ಟರ್ನ್ ಎಂಪ್ಲಾಯೀಸ್ ಯೂನಿಯನ್, ಸೌಥ್ ವೆಸ್ಟರ್ನ್ ರೈಲ್ವೆ ಮಜ್ದೂರ ಯೂನಿಯನ್ಗಳು ಈ ಚುನಾವಣೆಯಲ್ಲಿ ಸ್ಪರ್ಧಿಸಿವೆ.