ರೈಲ್ವೆ ವೇಳಾಪಟ್ಟಿ ಬದಲಾವಣೆ

indian_railway_660_122817022237_220320014032_180221022159
Published on


ಮಂಗಳೂರು : ನೇತ್ರಾವತಿ ಕ್ಯಾಬಿನ್ ಮತ್ತು ಮಂಗಳೂರು ಜಂಕ್ಷನ್ ರೈಲ್ವೆ ಸ್ಟೇಷನ್‌ನಲ್ಲಿ ಹಳಿಗಳ ನಿರ್ವಹಣೆ ಕಾಮಗಾರಿ
ಹಿನ್ನೆಲೆಯಲ್ಲಿ ಹಲವು ರೈಲ್ವೆ ಸಂಚಾರದ ವೇಳಾ ಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ.
ಮಂಗಳೂರು ಸೆಂಟ್ರಲ್ -ನಾಗರ್‌ಕೊಯಿಲ್ ಜಂಕ್ಷನ್ ಪರಶುರಾಮ ಎಕ್ಸ್‌ಪ್ರೆಸ್ (ರೈಲು ನಂ.16649)ಮೇ 29ರಂದು ಮಂಗಳೂರು ಸೆಂಟ್ರಲ್‌ನಿಂದ ಬೆಳಗ್ಗೆ 5.05ರ ಬದಲು 6.30ಕ್ಕೆ ನಿರ್ಗಮಿಸಲಿದೆ.
ಮಂಗಳೂರು ಸೆಂಟ್ರಲ್-ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ವೆಸ್ಟ್‌ಕೋಸ್ಟ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ (ರೈಲು ನಂ.22638) ಮೇ.28ರಂದು ರಾತ್ರಿ 11.45ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಹೊರಡುವ ಬದಲು ಅದೇ ರಾತ್ರಿ 12.15ಕ್ಕೆ ಉಳ್ಳಾಲ ಸ್ಟೇಷನ್‌ನಿಂದ ಹೊರಡಲಿದೆ. ಮಂಗಳೂರು ಸೆಂಟ್ರಲ್-ಉಳ್ಳಾಲ ಸ್ಟೇಷನ್ ಮಧ್ಯೆ ಈ ರೈಲು ಸಂಚಾರ ರದ್ದುಗೊಂಡಿದೆ.
ಮಂಗಳೂರು ಸೆಂಟ್ರಲ್-ಕೋಝಿಕೋಡ್ ಎಕ್ಸ್‌ಪ್ರೆಸ್ (ರೈಲು ನಂ.16610) ಮೇ 25,29 ಹಾಗೂ ಜೂ. 5 ಮತ್ತು 8ರಂದು ಬೆಳಗ್ಗೆ 5.15ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಹೊರಡುವ ಬದಲು 5.45ಕ್ಕೆ ಉಳ್ಳಾಲ ಸ್ಟೇಷನ್‌ನಿಂದ ಹೊರಡಲಿದೆ.ಮಂಗಳೂರು ಸೆಂಟ್ರಲ್-ಉಳ್ಳಾಲ ಸ್ಟೇಷನ್ ಮಧ್ಯೆ ಈ ರೈಲು ಸಂಚಾರ ರದ್ದುಗೊಂಡಿದೆ.
* ಮಾರ್ಗ ಮಧ್ಯೆ ನಿಲುಗಡೆ
ಪೋರ್‌ಬಂದರ್-ಕೊಚುವೇಲಿ ವೀಕ್ಲಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ (ರೈಲು ನಂ.20910) ಮೇ 23ರಂದು ಮಾರ್ಗ ಮಧ್ಯೆ 2.40 ಗಂಟೆ ನಿಲುಗಡೆಯಾಗಲಿದೆ. ಎರ್ನಾಕುಲಂ ಜಂಕ್ಷನ್-ಒಕಾ ವೀಕ್ಲಿ ಎಕ್ಸ್‌ಪ್ರೆಸ್ (ರೈಲು ನಂ.16338) ಮೇ.24ರಂದು 2.40 ಗಂಟೆ , ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ -ಮಂಗಳೂರು ಸೆಂಟ್ರಲ್ ವೆಸ್ಟ್ ಕೋಸ್ಟ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (ರೈಲು ನಂ.22637) ಮೇ 24ರಿಂದ 28ರವರೆಗೆ 1.10 ಗಂಟೆ , ಲೋಕಮಾನ್ಯ ತಿಲಕ್-ತಿರುವನಂತಪುರಂ ಸೆಂಟ್ರಲ್ ನೇತ್ರಾವತಿ ಎಕ್ಸ್‌ಪ್ರೆಸ್ (ರೈಲು ನಂ.16345)
ಮೇ.24ರಂದು 1.30 ಗಂಟೆ, ನಾಗರ್‌ಕೊಯಿಲ್ ಜಂಕ್ಷನ್-ಗಾಂಧಿಧಾಮ ಬಿಜಿ ವೀಕ್ಲಿ ಎಕ್ಸ್‌ಪ್ರೆಸ್ (ರೈಲು ನಂ.16336) ಮೇ 28ರಂದು 2.40 ಗಂಟೆ, ಎರ್ನಾಕುಲಂ ಜಂಕ್ಷನ್-ಹಝರತ್ ನಿಜಾಮುದ್ದೀನ್ ಜಂಕ್ಷನ್ ಸೂಪರ್ ಫಾಸ್ಟ್ ವೀಕ್ಲಿ ಎಕ್ಸ್‌ಪ್ರೆಸ್ (ರೈಲು ನಂ.12283) ಮೇ 28ರಂದು 1.10 ಗಂಟೆ ಮಾರ್ಗ ಮಧ್ಯೆ ನಿಲುಗಡೆಯಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
..............................

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net