ರೈಲ್ವೆ ಸ್ಟೇಷನ್ ರಸ್ತೆ ಕಾಮಗಾರಿ ಪರಿಶೀಲನೆ

Snd inspection
ಸಿಂಧನೂರಿನ ಗಂಗಾವತಿ ರಸ್ತೆಯಿಂದ ರೈಲ್ವೆ ಸ್ಟೇಷನ್ ಸಂಪರ್ಕ ರಸ್ತೆ ಕಾಮಗಾರಿಯನ್ನು ಮುನಿರಾಬಾದ್‌ನ ಗುಣಮಟ್ಟ ನಿಯಂತ್ರಣ ತಂಡ ಭೇಟಿ ನೀಡಿ ಪರಿಶೀಲಿಸಿತು. ಅಧಿಕಾರಿಗಳಾದ ಕೆ.ಗೋಪಾಲಯ್ಯ, ಕೆ.ಪಿ.ಸತ್ಯನಾರಾಯಣ ಶೆಟ್ಟಿ, ದಾವೂದ್, ಸಮೀರ್ ಇದ್ದರು.
Published on

ಸಿಂಧನೂರು: ನಗರದ ಗಂಗಾವತಿ ರಸ್ತೆಯಿಂದ ರೈಲ್ವೆ ಸ್ಟೇಷನ್‌ಗೆ ಹೋಗುವ ರಸ್ತೆ ಕಾಮಗಾರಿ ಭರದಿಂದ ನಡೆದಿದ್ದು, ಮುನಿರಾಬಾದ್‌ನ ಗುಣಮಟ್ಟ ನಿಯಂತ್ರಣ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

ನೀರಾವರಿ ಇಲಾಖೆಯಿಂದ 9 ಕೋಟಿ ರೂ. ವೆಚ್ಚದಲ್ಲಿ 1.7 ಕಿಮೀ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಮುನಿರಾಬಾದ್‌ನ ಕೆಎನ್‌ಎಲ್ ಗುಣಮಟ್ಟ ಪರಿಶೀಲನಾ ತಂಡದ ಎಇಇ ಕೆ.ಗೋಪಾಲಯ್ಯ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲಿಸಿದ್ದು, ಕಾಮಗಾರಿ ಗುಣಮಟ್ಟದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದೆ. ಯರಮರಸ್‌ನ ವೃತ್ತ ಕಚೇರಿ ಅಧೀಕ್ಷಕ ಕೆ.ಪಿ.ಸತ್ಯನಾರಾಯಣ ಶೆಟ್ಟಿ, ಉಪವಿಭಾಗದ ಎಇಇ ದಾವೂದ್, ಗುಣಮಟ್ಟ ಪರಿಶೀಲನಾ ತಂಡದ ಎಇ ಸಮೀರ್ ಇತರರಿದ್ದರು.

ಕಾಮಗಾರಿ ಬೇಗ ಮುಗಿಸಲಿ: ಸಿಂಧನೂರಿಗೆ ರೈಲು ಸಂಚಾರ ಆರಂಭದಿಂದಲೂ ರಸ್ತೆ ಕಾಮಗಾರಿ ನಡೆಯಬೇಕು ಎನ್ನುವ ಬೇಡಿಕೆ ಕೊನೆಗೂ ಈಡೇರುತ್ತಿದೆ. ಕಾಮಗಾರಿಗೆ ಬಹುದಿನಗಳ ಹಿಂದೆಯೇ ಚಾಲನೆ ನೀಡಲಾಗಿತ್ತು. ನೀರಾವರಿ ಇಲಾಖೆಯಿಂದ ಗುತ್ತಿಗೆದಾರರಿಗೆ ಮೂರು ಸಲ ನೋಟಿಸ್ ನೀಡಲಾಗಿತ್ತು. ಕೊನೆಗೂ ಗುತ್ತಿಗೆದಾರರು ಕಾಮಗಾರಿಗೆ ವೇಗ ನೀಡಿದ್ದು, ಈಗಾಗಲೇ ಅರ್ಥ್‌ವರ್ಕ್ ಪೂರ್ಣಗೊಳಿಸಿ ಮರಂ ಹಾಕಲಾಗುತ್ತಿದೆ. ಕಾಮಗಾರಿ ವಿಳಂಬ ಮಾಡದೆ ಬೇಗ ಪೂರ್ಣಗೊಳಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net