ರೈಲ್ವೆ ಗೇಟ್ ತೆರವಾಗದೆ ವಾಹನ ಸಂಚಾರ ಸ್ಥಗಿತ

rail gate
Published on

ಪಡುಬಿದ್ರಿ: ರೈಲು ಹಾದುಹೋಗಿ ಅರ್ಧ ಗಂಟೆಯಾದರೂ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ತೆರವಾಗದೆ ಅದಮಾರು ರೈಲ್ವೆ ಹಳಿ ಇಕ್ಕೆಲಗಳಲ್ಲಿ ಗುರುವಾರ ಮಧ್ಯಾಹ್ನ ವಾಹನ ಸಂಚಾರ ಸ್ಥಗಿತಗೊಂಡಿತು.

ಅದಮಾರು ಬಳಿಯ ಕೊಂಕಣ ರೈಲು ಮಾರ್ಗದಲ್ಲಿ ಸಿಎಸ್‌ಟಿ ರೈಲು ಹಾದೂ ಹೋಗುವ ಸಮಯದಲ್ಲಿ ಲೆವೆಲ್ ಕ್ರಾಸಿಂಗ್‌ಗೆ ಮಾನವ ಚಾಲಿತ ಗೇಟ್ ಹಾಕಲಾಗಿತ್ತು. ರೈಲು ಹಾದು ಹೋದ ಬಳಿಕ ರೈಲ್ವೆ ಸಿಬ್ಬಂದಿ ಗೇಟ್ ತೆರವುಗೊಳಿಸುವ ವೇಳೆ ಗೇಟ್ ಮೇಲಕ್ಕೆತ್ತುವ ಕಬ್ಬಿಣದ ರೋಪ್ ಕಡಿತಗೊಂಡ ಪರಿಣಾಮ ಗೇಟ್ ತೆರವಾಗದೆ ಅರ್ಧ ಗಂಟೆಗಳ ಕಾಲ ಎರ್ಮಾಳು- ಮುದರಂಗಡಿ ಸಂಪರ್ಕ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲಬೇಕಾಯಿತು. ಕೊನೆಗೆ ರೈಲ್ವೆ ಸಿಬ್ಬಂದಿ ಪರಿಶ್ರಮಪಟ್ಟು ಗೇಟ್ ಮಧ್ಯಭಾಗದಲ್ಲಿ ಲಾಕ್ ತೆರೆದು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net