

ಜಿ.ನಾಗರಾಜ್ ಬೂದಿಕೋಟೆ
ಚೆನ್ನೆ&ಬೆಂಗಳೂರು ಮಾರ್ಗದ ಕಾಮಸಮುದ್ರ ರೈಲ್ವೆ ಗೇಟ್ನಿಂದ ವಾಹನ ಸವಾರರಿಗೆ ನಿತ್ಯ ಒಂದಲ್ಲ ಒಂದು ಸಮಸ್ಯೆ ಉಂಟಾಗುತ್ತಿದ್ದು, ಗೇಟ್ನ ಕಿರಿಕಿರಿಯಿಂದ ಈ ಬಾಗದ ಜನರು ಹೈರಾಣಾಗಿದ್ದಾರೆ.
ಬಂಗಾರಪೇಟೆ ತಾಲೂಕು ಕೇಂದ್ರದಿಂದ ಸುಮಾರು 16 ಕಿಮೀ ದೂರದಲ್ಲಿರುವ ಕಾಮಸಮುದ್ರ ಹೋಬಳಿ ಕೇಂದ್ರಕ್ಕೆ ಪ್ರವೇಶ ಪಡೆಯಲು ರೈಲ್ವೆಗೇಟ್ ಹೆಬ್ಬಾಗಿಲಿನಂತಿದೆ. ಬೆಂಗಳೂರಿನಿಂದ ಚೆನ್ನೆಗೆ ಸಂಪರ್ಕ ಕಲ್ಪಿಸುವ ರೈಲ್ವೆ ಮಾರ್ಗ ಇದಾಗಿದ್ದು, ಕನಿಷ್ಠ ಹತ್ತು ನಿಮಿಷಕ್ಕೊಮ್ಮೆ ರೈಲುಗಳು, ಸರಕು ತುಂಬಿರುವ ಗೂಡ್ಸ್ ರೈಲು ಸಂಚರಿಸುತ್ತವೆ. ಈ ಮಾರ್ಗದಲ್ಲಿ ನಿತ್ಯ ಸುಮಾರು 150 ರೈಲುಗಳು ಸಂಚರಿಸುತ್ತವೆ. ಆದರೆ, ಈ ಮಾರ್ಗ ತಮಿಳುನಾಡಿನ ಹೊಸೂರು, ಕೃಷ್ಣಗಿರಿ, ವ್ಯಾಪನಪಲ್ಲಿಗೆ ಸಂಪರ್ಕ ಕಲ್ಪಿಸುತ್ತದೆ. ಜತೆಗೆ ಕಾಮಸಮುದ್ರದಿಂದ ಬಂಗಾರಪೇಟೆ ಮತ್ತು ಕೆಜಿಎಫ್ಗೆ ತೆರಳಲು ಇದೇ ರೈಲ್ವೆ ಟ್ರಾ$್ಯಕ್ ದಾಟಿಯೇ ಹೋಗಬೇಕು. ಹೀಗಾಗಿ ಈ ರಸ್ತೆಯಲ್ಲಿ ಸಂಚರಿಸುವ ಸಾವಿರಾರು ವಾಹನಗಳು ಪ್ರತಿ ಹತ್ತು&ಹದಿನೈದು ನಿಮಿಷಕ್ಕೆ ಕನಿಷ್ಠ 10 ರಿಂದ 15 ನಿಮಿಷ ಕಾಯುವುದು ಅನಿವಾರ್ಯವಾಗಿದೆ. ಆದ್ದರಿಂದ ಈ ರಸ್ತೆಯಲ್ಲಿ ಬೆಳಗ್ಗೆಯಿಂದ ರಾತ್ರಿಯವರೆಗೂ ವಾಹನಗಳ ದಟ್ಟಣೆ ಇರುತ್ತದೆ. ಆಂಬುಲೆನ್ಸ್ ನಂಥ ತುರ್ತು ವಾಹನ ಬಂದರೂ ರೈಲು ಬಂದು ಹೋಗುವವರೆಗೂ ಕಾಯಲೇಬೇಕಾದ ಪರಿಸ್ಥಿತಿ ಇದೆ.
ಮೇಲ್ಸೇತುವೆ ನಿರ್ಮಾಣ ಮಾಡಲಿ: ಈ ಸಮಸ್ಯೆಗೆ ಮುಕ್ತಿ ಕಾಣಿಸಲು ಮೇಲ್ಸೇತುವೆ ನಿರ್ಮಾಣ ಮಾಡುವಂತೆ ಕಾಮಸಮುದ್ರ ಗ್ರಾಮಸ್ಥರು ಈ ಹಿಂದೆ ಸಂಸದರಾಗಿದ್ದ ಎಸ್.ಮುನಿಸ್ವಾಮಿ ಅವರಿಗೆ ಮನವಿ ಸಲ್ಲಿಸಿದ್ದರು. ಅದರಂತೆ ಲೋಕಸಭೆ ಚುನಾವಣೆಗೂ ಮುಂಚೆಯೇ ಮೇಲ್ಸೇತುವೆ ನಿರ್ಮಿಸಿ ಸಮಸ್ಯೆ ಬಗೆಹರಿಸುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ ಚುನಾವಣೆ ಮುಗಿದು ಹೊಸ ಸಂಸದರು ಆಯ್ಕೆಯಾದರೂ ಇನ್ನೂ ಕಾಮಗಾರಿ ಕಾರ್ಯರೂಪಕ್ಕೆ ಬಂದಿಲ್ಲ. ಹೆಚ್ಚು ಸಮಯ ಕಾಯಬೇಕು ಎನ್ನುವ ವಿಚಾರಕ್ಕೆ ಗೇಟ್ ಹಾಕುವ ವೇಳೆ ಕೆಲವು ವಾಹನ ಸವಾರರು ನುಗ್ಗುವುದು, ಗೇಟು ಮುಚ್ಚುವ ಹಾಗೂ ತೆಗೆಯುವ ವಿಚಾರದಲ್ಲಿ ವಾಹನ ಸವಾರರು ಗೇಟ್ಮನ್ ಜತೆಗೆ ವಾಕ್ ಸಮರ ನಡೆಸುವ ನಿದರ್ಶನಗಳು ಇವೆ. ಶ್ರೀವೇ ನೂತನ ಸಂಸದ ಎಂ.ಮಲ್ಲೇಶ್ಬಾಬು, ಮುತುವರ್ಜಿವಹಿಸಿ ಮೇಲ್ಸೇತುವೆ ನಿರ್ಮಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.
ಮೇಲ್ಸೇತುವೆ ನಿರ್ಮಾಣ ಸಂಬಂಧ ಹುಬ್ಬಳ್ಳಿಯಲ್ಲಿ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಅಧಿಕಾರಿಗಳಿಂದಲೂ ಉತ್ತಮ ಸ್ಪಂದನೆ ಸಿಕ್ಕಿದೆ. ಆದಷ್ಟು ಬೇಗ ಕಾಮಗಾರಿ ಆರಂಭವಾಗುವ ನಂಬಿಕೆ ಇದೆ.
ಎಂ.ಮಲ್ಲೇಶ್ಬಾಬು ಸಂಸದ
ಕಾಮಸಮುದ್ರ ಬಳಿ ಮೇಲ್ಸೇತುವೆ ನಿರ್ಮಾಣ ಮಾಡಬೇಕು ಎಂಬುದು ಈ ಭಾಗದ ಜನರ ಹಲವು ದಶಕಗಳ ಬೇಡಿಕೆಯಾಗಿದ್ದು, ಈ ಹಿಂದೆ ಕೆಎಚ್.ಮುನಿಯಪ್ಪ ಸಂಸದರಾಗಿದ್ದಾಗ ಸರ್ವೇ ನಡೆದಿತ್ತು. ನಂತರ ಆಯ್ಕೆಯಾದ ಎಸ್.ಮುನಿಸ್ವಾಮಿ ನೇತೃತ್ವದಲ್ಲಿ ಮಣ್ಣು ಪರೀೆ ಮಾಡಲಾಗಿತ್ತು. ಆದರೆ, ಕಾಮಗಾರಿ ಆರಂಭವಾಗಿಲ್ಲ. ಆಂಬುಲೆನ್ಸ್ ಸೇರಿ ತುರ್ತು ಸೇವೆಗಳಿಗೂ ಅನನುಕೂಲವಾಗಿದ್ದು, ನೂತನ ಸಂಸದರು ಮೇಲ್ಸೇತುವೆ ನಿರ್ಮಿಸಲು ಮುಂದಾಗಬೇಕು.
ಪಿಚ್ಚಳ್ಳಿ ಗೋವಿಂದರಾಜುಲುಡಿಸಿಸಿ ಬ್ಯಾಂಕ್ ನಿರ್ದೇಶಕ