ಬೆಟಗೇರಿ ರೈಲ್ವೆ ಹೋರಾಟ ಸಮಿತಿಯಿಂದ ರೈಲ್ವೆ ದಿನಾಚರಣೆ

16GDG03
Published on

ವಿಜಯವಾಣಿ ಸುದ್ದಿಜಾಲ ಗದಗ
ಭಾರತೀಯ ರೈಲ್ವೆಗೆ 171ನೇ ಹಾಗೂ ಗದಗ ರೈಲ್ವೆಗೆ 141ನೇ ವಾಷಿರ್ಕೋತ್ಸವ ನಿಮಿತ್ಯ ಬೆಟಗೇರಿ ರೈಲ್ವೆ ಹೋರಾಟ ಸಮಿತಿಯಿಂದ ಮಂಗಳವಾರ ನಗರದ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ದಿನಾಚರಣೆ ಆಚರಿಸಲಾಯಿತು.
ನಗರದ ರೈಲ್ವೆ ನಿಲ್ದಾಣದಲ್ಲಿರುವ ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಪುತ್ಥಳಿಗೆ ಪೂಜೆ ನೆರವೇರಿಸಿ, ರೈಲ್ವೆ ಸಿಬ್ಬಂದಿ ಹಾಗೂ ಪ್ರಯಾಣಿಕರಿಗೆ ಸಿಹಿ ವಿತರಿಸಿ ಗುಲಾಬಿ ಹೂ ನೀಡುವುದರ ಮೂಲಕ ಸಂಭ್ರಮಾಚರಣೆ ಮಾಡಲಾಯಿತು.
ಸಮಿತಿ ಅಧ್ಯ ಗಣೇಶಸಿಂಗ್​ ಬ್ಯಾಳಿ ಮಾತನಾಡಿ, ನಮ್ಮ ದೇಶದಲ್ಲಿ 1853ರ ಏ.16 ರಂದು ಕೊಲ್ಕತ್ತಾದ ಹೌರಾ ನಿಲ್ದಾಣದಿಂದ 24 ಮಯಲಿ ಸಂಚರಿಸಿದ ಇಸ್ಟ್​ ಇಂಡಿಯಾ ಕಂಪನಿಯ ರೈಲ್ವೆ ದೇಶದ ಮೊದಲನೇಯ ರೈಲು ಪ್ರಯಾಣವಾಗಿತ್ತು ಎಂದರು.
ಈ ಸಂದರ್ಭದಲ್ಲಿ ರೇಲ್ವೆ ಇಲಾಖೆಯ ಉಪ ಅದೀಕ ಮನೋಜ ವಾಗಡೆ, ಆರೋಗ್ಯ ಅದೀಕ ಕಿರಣಕುಮಾರ ಹಡಪದ, ವಿಕ್ರಮ ಬೋರಕರ, ರೇಣುಕಾ ಬೋರಕರ, ಸಿದ್ದಪ್ಪ ಮಾದರ, ಪೀರಸಾಬ ಚೋಳನ್ನವರ, ಹನುಮಂತ ಸಕ್ರಿ, ಮಾದೇವಿ ದೊಡ್ಡಮನಿ, ಎಂ. ಟಿ. ಕಬ್ಬಿಣದ, ಎಸ್​. ವಿ. ಸುಲಾಖೆ, ಲಿಂಗರಾಜ ಬಗಲಿ, ಬಸವರಾಜ ತಡಸದ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net