ರೈಲ್ವೆ ಸರಕು ಸಾಗಣೆ ಗ್ರಾಹಕರ ಸಭೆ

New Rail goods New
Published on

ಹುಬ್ಬಳ್ಳಿ : ನೈಋತ್ಯ ರೈಲ್ವೆ ವಲಯವು 2025-26ನೇ ಆರ್ಥಿಕ ವರ್ಷದ ಮೊದಲ ಸರಕು ಸಾಗಣೆ ಗ್ರಾಹಕರ ಸಭೆಯನ್ನು ಇಲ್ಲಿನ ರೈಲ್ ಸೌಧದಲ್ಲಿ ಗುರುವಾರ ಆಯೋಜಿಸಲಾಗಿತ್ತು.

ಅಧ್ಯಕ್ಷತೆ ವಹಿಸಿದ್ದ ವಲಯದ ಮಹಾಪ್ರಬಂಧಕ ಮುಕುಲ್ ಸರನ್ ಮಾಥುರ್, ಮಾರುಕಟ್ಟೆ ಸ್ನೇಹಿ ಬಾಂಧವ್ಯಗಳನ್ನು ಬೆಳೆಸುವುದರಲ್ಲಿ ನೈಋತ್ಯ ರೈಲ್ವೆ ಬದ್ಧವಿರುವುದನ್ನು ಪುನರುಚ್ಚರಿಸಿದರು.

ಲೋಡಿಂಗ್ ವೇಳೆ ಎದುರಾಗುವ ಕಾರ್ಯುಚರಣಾತ್ಮಕ ಅಡಚಣೆಗಳನ್ನು ತ್ವರಿತವಾಗಿ ಪರಿಹರಿಸಲಾಗುವುದು ಎಂಬ ಭರವಸೆಯನ್ನು ಗ್ರಾಹಕರಿಗೆ ನೀಡಿದರು.

ಸಂಜೆ 6 ರಿಂದ ಬೆಳಗ್ಗೆ 6 ಗಂಟೆವರೆಗೆ ಕಬ್ಬಿಣದ ಅದಿರು ಲೋಡಿಂಗ್ ಮೇಲೆ ರಾಜ್ಯ ಸರ್ಕಾರ ವಿಧಿಸಿರುವ ನಿರ್ಬಂಧಗಳ ಮಧ್ಯೆಯೂ ಲೋಡಿಂಗ್ ಯೋಜನೆ ಸುಧಾರಣೆೆ, ಕಾರ್ಯುಚರಣೆಯ ಬೆಂಬಲ ವಿಸ್ತರಣೆ ಮತ್ತು ಸಮಸ್ಯೆಗಳ ಪರಿಹಾರ ಕುರಿತಂತೆ ಪರಿಣಾಮಕಾರಿ ಚರ್ಚೆಗಳು ನಡೆದವು.

ಈ ಸವಾಲುಗಳ ಮಧ್ಯೆಯೂ ನೈಋತ್ಯ ರೈಲ್ವೆ 2025ರ ಜೂನ್​ವರೆಗೆ ನಿತ್ಯ ಸರಾಸರಿ 44 ರೇಕ್​ಗಳನ್ನು ಲೋಡ್ ಮಾಡುವ ಮೂಲಕ ಶ್ಲಾಘನೀಯ ಸಾಧನೆ ಮೆರೆದಿದೆ. ಪ್ರಮುಖ ಪಾಲುದಾರ ಜೆಎಸ್​ಡಬ್ಲ್ಯೂ ಸ್ಟೀಲ್ ಸರಾಸರಿ 241 ರೇಕ್​ಗಳ ಲೋಡಿಂಗ್ ಮೂಲಕ ಮೊದಲ ತ್ರೖೆಮಾಸಿಕದಲ್ಲಿ 0.96 ಮಿಲಿಯನ್ ಟನ್​ಗಳ ಸರಕು ಸಾಗಣೆ ನಡೆಸಿದೆ.

ಹಿಂದಿನ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ 160 ರೇಕ್​ಗಳು ಹಾಗೂ 0.64 ಮಿಲಿಯನ್ ಟನ್​ಗಳ ಲೋಡಿಂಗ್​ನೊಂದಿಗೆ ಹೋಲಿಸಿದರೆ ಈ ಸಾಧನೆ ಬಹುಮಾನಾರ್ಥಕವಾಗಿದೆ.

ಜೆಎಸ್​ಡಬ್ಲ್ಯೂ ಸ್ಟೀಲ್​ನ ಉಪಾಧ್ಯಕ್ಷ ಸುಶೀಲ ನೋವಲ್, ಎನ್​ಎಂಡಿಸಿ ಸಂಸ್ಥೆಯ ಜಿ.ಎಂ. ಕೆ.ಪಿ. ಸಿಂಗ್, ಮುಕುಂದ್ ಸ್ಟೀಲ್​ನ ಗ್ರೂಪ್ ಜಿ.ಎಂ. ಪ್ರವೀಣ ಚಂದ್ರ, ಟಿವಿಎಸ್ ಮೋಟಾರ್ ಕಂಪನಿಯ ಮಾರ್ಕೆಟಿಂಗ್ ಮುಖ್ಯಸ್ಥ ನಾಗೇಂದ್ರ ಪ್ರಸಾದ್ ಹಾಗೂ ಟೊಯೋಟಾ ಕಿಲೋಸ್ಕರ್, ನೆಸ್ಲೆ ಸೇರಿದಂತೆ ಉಕ್ಕು, ಕಬ್ಬಿಣದ ಅದಿರು, ಆಟೋಮೊಬೈಲ್, ಸಿಮೆಂಟ್, ರಸಗೊಬ್ಬರ, ಕಂಟೇನರ್, ಸಕ್ಕರೆ, ಅಕ್ಕಿ, ಪೆಟ್ರೋಲಿಯಂ ಉತ್ಪನ್ನಗಳಂತಹ ವಿವಿಧ ವಲಯಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ರೈಲ್ವೆ ಪರವಾಗಿ ಹೆಚ್ಚುವರಿ ಮಹಾಪ್ರಬಂಧಕ ಕೆ.ಎಸ್. ಜೈನ್, ಪ್ರಧಾನ ಮುಖ್ಯ ಕಾರ್ಯುಚರಂಎ ವ್ಯವಸ್ಥಾಪಕ ಪ್ರಶಾಂತ ಕುಮಾರ, ಪ್ರಧಾನ ಮುಖ್ಯ ವಾಣಿಜ್ಯ ವ್ಯವಸ್ಥಾಪಕ ಎಸ್.ಪಿ. ಶಾಸ್ತ್ರಿ ಹಾಗೂ ಮತ್ತಿತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net