ಸ್ವಚ್ಛತಾ ಪಖವಾಡದಲ್ಲಿ ನೈಋತ್ಯ ರೈಲ್ವೆಗೆ ಪ್ರಥಮ ಸ್ಥಾನ

RAIL NEWS
Published on

ಹುಬ್ಬಳ್ಳಿ : ರೈಲ್ವೆ ಸಚಿವಾಲಯ ಆಯೋಜಿಸಿದ್ದ 2022ನೇ ಸಾಲಿನ ಸ್ವಚ್ಛತಾ ಪಖವಾಡದ ಪ್ರಥಮ ಸ್ಥಾನ ನೈಋತ್ಯ ರೈಲ್ವೆ ವಲಯಕ್ಕೆ ಲಭಿಸಿದೆ.

ರೈಲ್ವೆ ಮಂಡಳಿ ಅಧ್ಯಕ್ಷೆ, ಸಿಇಒ ಜಯವರ್ವ ಸಿನ್ಹಾ ಅವರು ದೆಹಲಿಯ ರೈಲ್ವೆ ಮಂಡಳಿ ಭವನದಲ್ಲಿ ಶುಕ್ರವಾರದಂದು ಸೆ. 16 ರಿಂದ ಅ. 2ರವರೆಗೆ ಹಮ್ಮಿಕೊಂಡಿರುವ ಸ್ವಚ್ಛತಾ ಪಖವಾಡ-2023 ಅನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು, ಕಳೆದ ವರ್ಷದ ಪಖವಾಡ ಅಭಿಯಾನದಲ್ಲಿ ಅತ್ಯುತ್ತಮ ಸಾಧನೆ ತೋರಿದ ರೈಲ್ವೆ ವಲಯಗಳ ಹೆಸರುಗಳನ್ನು ಪ್ರಕಟಿಸಿದರು.

ನೈಋತ್ಯ ರೈಲ್ವೆಗೆ ಪ್ರಥಮ ಸ್ಥಾನ, ಪಶ್ಚಿಮ ರೈಲ್ವೆಗೆ ದ್ವಿತೀಯ ಸ್ಥಾನ ಹಾಗೂ ಈಶಾನ್ಯ ರೈಲ್ವೆಗೆ ತೃತೀಯ ಸ್ಥಾನ ಲಭಿಸಿದೆ.

ಇದೇ ಸಂದರ್ಭದಲ್ಲಿ ಸ್ವಚ್ಛತಾ ಪ್ರತಿಜ್ಞೆ ಬೋಧಿಸಲಾಯಿತು. ಸ್ವಚ್ಛತಾ ಪಖವಾಡದ ಅಂಗವಾಗಿ ರೈಲು ನಿಲ್ದಾಣ, ಕಚೇರಿ, ಕಾಲನಿಗಳಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವುದು, ಜೈವಿಕ ಶೌಚಗೃಹಗಳ ಬಳಕೆ, ಪ್ಲಾಸ್ಟಿಕ್ ಬಳಕೆ ನಿಲ್ಲಿಸುವುದು ಸೇರಿದಂತೆ ವಿವಿಧ ಸ್ವಚ್ಛ ಹಾಗೂ ಆರೋಗ್ಯಕರ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ತೀರ್ವನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net