ರೈಲ್ವೆ ನೌಕರ ಆತ್ಮಹತ್ಯೆ

sucide
Published on

ಹುಬ್ಬಳ್ಳಿ: ಮದ್ಯವ್ಯಸನಿಯಾಗಿದ್ದ ರೈಲ್ವೆ ನೌಕರ ವಿಷ ಕುಡಿದು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ.

ಕೇಶ್ವಾಪುರ ನ್ಯೂ ವಿನೋಬಾ ನಗರದ ರೈಲ್ವೆ ಕ್ವಾರ್ಟರ್ಸ್‌ನ ಪ್ರಕಾಶ ಕೋಮಲಪಾಟಿ (55) ಆತ್ಮಹತ್ಯೆ ಮಾಡಿಕೊಂಡವರು. ಇವರು ಸಾಲದ ಹೊರೆ ಅಥವಾ ಇನ್ಯಾವುದೋ ವಿಷಯವಾಗಿ ಮನನೊಂದು ಶನಿವಾರ ವಿಷಕಾರಿ ದ್ರವ ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದರು. ರೈಲ್ವೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದರೂ ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಕೊನೆಯುಸಿರೆಳೆದಿದ್ದಾರೆ. ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net