

ಹುಬ್ಬಳ್ಳಿ :ರಾಯಬರೇಲಿಯಲ್ಲಿ ಆ. 9 ರಿಂದ 11ರವರೆಗೆ ಆಯೋಜಿಸಿದ್ದ ಆಲ್ ಇಂಡಿಯಾ ಇಂಟರ್ ರೈಲ್ವೆ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ನೈಋತ್ಯ ರೈಲ್ವೆ ವಲಯದ ಕ್ರೀಡಾಪಟುಗಳು ಅತ್ಯುತ್ತಮ ಸಾಧನೆ ತೋರಿದ್ದಾರೆ.
136 ಅಂಕಗಳೊಂದಿಗೆ ನೈಋತ್ಯ ರೈಲ್ವೆ ವಲಯ ಚಾಂಪಿಯನ್ಶಿಪ್ ಪಟ್ಟ ಪಡೆದುಕೊಂಡಿತು. ಸದನ್ ರೈಲ್ವೆ 110 ಅಂಕಗಳೊಂದಿಗೆ ಮೊದಲ ರನ್ನರ್ ಅಪ್ ಹಾಗೂ 101 ಅಂಕಗಳೊಂದಿಗೆ ಎರಡನೇ ರನ್ನರ್ ಅಪ್ ಸ್ಥಾನಕ್ಕೆ ಪಶ್ಚಿಮ ರೈಲ್ವೆ ತೃಪ್ತಿಪಟ್ಟುಕೊಂಡಿತು.
ನೈಋತ್ಯ ರೈಲ್ವೆ ವಲಯದ ಕ್ರೀಡಾಪಟುಗಳು ಒಟ್ಟಾರೆ ಚಾಂಪಿಯನ್ಶಿಪ್ ಜತೆಗೆ ವೈಯಕ್ತಿಕ ವಿಭಾಗದಲ್ಲಿಯೂ ಉತ್ತಮ ಪ್ರದರ್ಶನ ನೀಡಿದರು, ಪುರುಷರ ತಂಡ ಚಾಂಪಿಯನ್ಶಿಪ್ ಪಡೆದುಕೊಂಡರೆ, ಮಹಿಳಾ ತಂಡ 2ನೇ ರನ್ನರ್ ಅಪ್ಗೆ ಕಾಲಿಟ್ಟಿತು.
ಪುರುಷರ ವಿಭಾಗಕ್ಕೆ 2 ಚಿನ್ನದ ಪದಕ, 6 ಬೆಳ್ಳಿ ಪದಕ ಹಾಗೂ ಒಂದು ಕಂಚಿನ ಪದಕಗಳು ದೊರೆತವು. ಮಹಿಳಾ ವಿಭಾಗಕ್ಕೆ 4 ಚಿನ್ನದ ಪದಕ, 3 ಬೆಳ್ಳಿ ಪದಕ ಹಾಗೂ 4 ಕಂಚಿನ ಪದಕಗಳು ಬಂದವು.