

ಹುಬ್ಬಳ್ಳಿ : ಹುಬ್ಬಳ್ಳಿ ರೈಲ್ವೆ ವಿಭಾಗದ ನವಲೂರು ಬಳಿ ನಿರ್ವಹಣಾ ಕಾಮಗಾರಿಗಾಗಿ ಲೈನ್ ಬ್ಲಾಕ್ಗೆ ಅನುಮತಿ ನೀಡಿರುವುದರಿಂದ ವಿವಿಧ ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.
ಬೆಳಗಾವಿ- ಮೈಸೂರು ವಿಶ್ವಮಾನವ ಎಕ್ಸ್ಪ್ರೆಸ್ ರೈಲು ಆ. 26 ರಿಂದ 29ರವರೆಗೆ ಮತ್ತು 31 ರಿಂದ ಸೆ. 7ರವರೆಗೆ ಬೆಳಗಾವಿಯಿಂದ 60 ನಿಮಿಷ ತಡವಾಗಿ ಹೊರಡಲಿದೆ.
ಬೆಳಗಾವಿ - ಮೈಸೂರು ವಿಶ್ವಮಾನ ಎಕ್ಸ್ಪ್ರೆಸ್ ರೈಲು ಆ. 30ರಂದು ಬೆಳಗಾವಿಯಿಂದ 90 ನಿಮಿಷ ತಡವಾಗಿ ಹೊರಡಲಿದೆ.
ಮೈಸೂರು - ಬೆಳಗಾವಿ ವಿಶ್ವಮಾನವ ಎಕ್ಸ್ಪ್ರೆಸ್ ರೈಲು ಸೆ. 7 ರಿಂದ 10ರವರೆಗೆ ಹುಬ್ಬಳ್ಳಿವರೆಗೆ ಮಾತ್ರ ಸಂಚರಿಸಲಿದೆ.