ವಾರದೊಳಗೆ ಮತ್ಸೃ ಗಂಧ ಪುನಾರಂಭ ನಿರೀಕ್ಷೆ

railway-2
Published on

ಮಂಗಳೂರು: ಬಹು ನಿರೀಕ್ಷಿತ ಹಾಗೂ ಮಂಗಳೂರಿಗರಿಗೆ ಅನುಕೂಲವಾಗುವ ಮತ್ಸೃಗಂಧ ರೈಲು ಇನ್ನೊಂದು ವಾರದೊಳಗೆ ಸಂಚಾರ ಪ್ರಾರಂಭಿಸುವ ಸಾಧ್ಯತೆ ಗೋಚರಿಸಿದೆ.

ಕೋವಿಡ್ ಲಾಕ್‌ಡೌನ್ ಶುರುವಾದಾಗ ಸ್ಥಗಿತಗೊಂಡು ಇದುವರೆಗೆ ಓಡದಿರುವ ಮತ್ಸೃಗಂಧ ರೈಲನ್ನು ಮತ್ತೆ ಶುರು ಮಾಡುವುದಕ್ಕೆ ರೈಲ್ವೆ ಮಂಡಳಿ ಒಪ್ಪಿಗೆ ಸೂಚಿಸಿದೆ.

ಮುಂಬೈ-ಮಂಗಳೂರು ಸೆಂಟ್ರಲ್ ಮಧ್ಯೆ ಓಡುವ ಈ ರೈಲಿನ ಪುನರಾರಂಭದ ಬಗ್ಗೆ ಕೊಂಕಣ ರೈಲ್ವೆಯವರ ಪ್ರಸ್ತಾಪಕ್ಕೆ ಮಂಡಳಿ ಅನುಮೋದನೆ ನೀಡಿದೆ. ಈ ಕುರಿತ ಆದೇಶವನ್ನು ಕೊಂಕಣ ರೈಲ್ವೆ ಅಧಿಕಾರಿಗಳಿಗೆ ಮಂಡಳಿ ನೀಡಿದೆ. ಕೊಂಕಣ ರೈಲ್ವೆಗೆ ಸೇರಿದ ಹಳಿಯಲ್ಲಿ ಓಡುವ ರೈಲು ದಕ್ಷಿಣ ರೈಲ್ವೆಗೆ ಸೇರಿದ್ದು, ಅದಕ್ಕಾಗಿ ರೈಲ್ವೆ ಬೋಗಿ, ಇಂಜಿನ್ ಮತ್ತು ಸಮಯವನ್ನು ದಕ್ಷಿಣ ರೈಲ್ವೆ ಗೊತ್ತುಪಡಿಸಬೇಕಾದ ಹಿನ್ನೆಲೆಯಲ್ಲಿ ಆದೇಶವನ್ನು ಕೊಂಕಣ ರೈಲ್ವೆ ದಕ್ಷಿಣ ರೈಲ್ವೆಗೆ ಕಳುಹಿಸಿದೆ.

ಅಲ್ಲಿ ರೈಲಿನ ಸಮಯ ಅಂತಿಮಗೊಂಡು ಇನ್ನೊಂದು ವಾರದಲ್ಲಿ ರೈಲು ಸಂಚಾರ ಪುನರಾರಂಭಗೊಳ್ಳಬಹುದು ಎಂದು ರೈಲ್ವೆ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net