ರದ್ದಾಗಿರುವ ರೈಲುಗಳು ಸಂಚರಿಸಲಿ

26 MANJU 03
Published on

ಹೊಸಪೇಟ : ನಗರದ ರೈಲ್ವೇ ನಿಲ್ದಾಣದಲ್ಲಿ ಇಲಾಖೆಯ ವಾಣಿಜ್ಯ ನಿರೀಕ್ಷಕ ಶ್ರೀನಿವಾಸ್ ಮೆಟ್ಲಾ ನೇತೃತ್ವದಲ್ಲಿ ಸಲಹಾ ಸಮಿತಿ ಸದಸ್ಯರ ಸಭೆ ಗುರುವಾರ ನಡೆಯಿತು.

ಸಮಿತಿಯ ಸದಸ್ಯ ಮಹೇಶ್ ಕುಡುತಿನಿ ಮಾತನಾಡಿ, ಕಳೆದ ಐದು ತಿಂಗಳಿAದ ಗಾಡಿ ಸಂಖ್ಯೆ 07335/36 ಬೆಳಗಾವಿ -ಹೊಸಪೇಟೆ - ಹೈದ್ರಾಬಾದ್ - ಭದ್ರಾಚಲಂ ರೈಲು ರದ್ದಾಗಿದೆ. ಇದರಿಂದ ವಿಜಯನಗರ, ಬಳ್ಳಾರಿ ಮಾತ್ರವಲ್ಲ ಉತ್ತರ ಕರ್ನಾಟಕ ಜಿಲ್ಲೆಗಳ ಪ್ರಯಾಣಿಕರ ಪರದಾಡುವತಾಗಿದೆ. ಯಾತ್ರಾಸ್ಥಳವಾದ ಮಂತ್ರಾಲಯ, ಹೈದ್ರಾಬಾದ್ ಮತ್ತು ಭದ್ರಾದ್ರಿಗೆ ತೆರಳುವವರಿಗೆ ನೇರ ಸಂಪರ್ಕ ತಪ್ಪಿಹೋಗಿದೆ. ಆದ್ದರಿಂದ ಈ ರೈಲನ್ನು ಕೂಡಲೇ ಪುನರ್ ಆರಂಭಿಸಬೇಕು ಒತ್ತಾಯಿಸಿದರು.

ಹಂಪಿ ಎಕ್ಸ್ಪ್ರೇಸ್ ರೈಲಿನಲ್ಲಿ ಹೊಸಪೇಟೆ-ಹುಬ್ಬಳ್ಳಿ ನಡುವೆ ಹೋಗಿ ಬರಲು ಸಾಮಾನ್ಯ ಧರ್ಜೆ ಟಿಕೆಟ್ ಪಡೆದು ಕೆಲವು ನಿಗದಿತ ಸ್ಲೀಪರ್ ಕ್ಲಾಸ್ ಕೋಚ್‌ಗಳಲ್ಲಿ ಪ್ರಯಾಣಿಸುವ ಸೌಲಭ್ಯ ಕಲ್ಪಿಸಲಾಗಿತ್ತು. ಇದನ್ನು ನಿರಂತರವಾಗಿ ಮುಂದುವರೆಸಬೇಕು. ಹುಬ್ಬಳ್ಳಿ-ವಿಜಯವಾಡ ಮತ್ತು ವಿಜಯವಾಡ-ಹುಬ್ಬಳ್ಳಿ ರೈಲಿನಲ್ಲಿಯೂ ಸಹ ಹೊಸಪೇಟೆ, ಬಳ್ಳಾರಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ನಿಗದಿತ ಸ್ಲೀಪರ್ ಕೋಚ್‌ಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಸಮಿತಿಯ ವೈ.ಯಮುನೇಶ್ ಮಾತನಾಡಿ, ಹೊಸಪೇಟೆ ಮಾರ್ಗವಾಗಿ ಸಂಚರಿಸುತ್ತಿರುವ ತಿರುಪತಿ-ಹುಬ್ಬಳ್ಳಿ ಹಾಗೂ ಗುಂತಕಲ್-ಹುಬ್ಬಳ್ಳಿ ಈ ಎರಡು ರೈಲುಗಳು ಪ್ರತಿನಿತ್ಯ ವಿಳಂಬವಾಗಿ ಸಂಚರಿಸುತ್ತಿದೆ. ಇದರಿಂದ ಹಲವು ಸಮಸ್ಯೆ ಆಗುತ್ತಿದ್ದು, ಸಮಯ ಪಾಲನೆ ಕ್ರಮ ಕೈಗೊಳ್ಳಬೇಕು. ಅಲ್ಲದೇ ಕೆಲವು ರೈಲುಗಳ ಶೌಚಾಲಯಗಳಲ್ಲಿ ನೀರಿನ ವ್ಯವಸ್ಥೆ ಇಲ್ಲದೇ ದುರ್ನಾತ ಹರಡುತ್ತಿದ್ದು, ಸ್ವಚ್ಚತೆ ಕಾಪಾಡಬೇಕು. ನಿಲ್ದಾಣದ ಪಾರ್ಕಿಂಗ್ ಆವರಣದಲ್ಲಿ ಪ್ರಯಾಣಿಕರ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಸುಸರ್ಜಿತ ಶೌಚಾಲಯವನ್ನು ನಿರ್ಮಿಸಲು ಒತ್ತಾಯಿಸಿದರು.

ಇಲಾಖೆಯ ಶ್ರೀನಿವಾಸ್ ಮೆಟ್ಲಾ ಮಾತನಾಡಿ, ಇಲ್ಲಿನ ನಿಲ್ದಾಣವನ್ನು ಅಮೃತ್ ಭಾರತ್ ಸ್ಟೇಷನ್ ಯೋಜನೆ ಅಡಿಯಲ್ಲಿ ಅಭಿವೃದ್ದಿ ಗೊಳಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಪ್ರಯಾಣಿಕರ ಅಗತ್ಯಕ್ಕೆ ಅನುಗುಣವಾಗಿ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net