ರೈಲ್ವೆ ಇಂಜಿನ್ ಮೇಲೆ ಕುಸಿದ ಗುಡ್ಡ

02
Published on

ಬೆಳಗಾವಿ: ನಿಜಾಮುದ್ದೀನ್-ವಾಸ್ಕೋಡಗಾಮ ಎಕ್ಸ್‌ಪ್ರೆಸ್ ರೈಲಿನ ಇಂಜಿನ್ ಮೇಲೆ ಬುಧವಾರ ಗುಡ್ಡ ಕುಸಿದ್ದು, ಅದೃಷ್ಟವಶಾತ್ ರೈಲಿನಲ್ಲಿದ್ದ 142 ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ರೈಲು ಸೋಮವಾರ ಮಧ್ಯಾಹ್ನ ದೆಹಲಿಯಿಂದ ಮಡಗಾಂವ್‌ಗೆ ತೆರಳುತ್ತಿದ್ದ ಸಂದರ್ಭದಲ್ಲಿ ಬುಧವಾರ ಬೆಳಗ್ಗೆ ಕ್ಯಾಸರ್‌ಲಾಕ್‌ನಿಂದ ಕರಂಜೋಲ್ ರೈಲ್ವೆ ಸ್ಟೇಶನ್ ಮಾರ್ಗ ಮಧ್ಯದಲ್ಲಿ ಗುಡ್ಡ ಕುಸಿತವಾಗಿದೆ. ಘಟನೆ ತಿಳಿದ ರೈಲ್ವೆ ಅಧಿಕಾರಿಗಳು ಅಲ್ಲಿಗೆ ತೆರಳಿ, ಪ್ರಯಾಣಿಕರಿಗೆ ಆಹಾರದ ವ್ಯವಸ್ಥೆ ಕಲ್ಪಿಸಿದ್ದರು.

ಬೆಳಗ್ಗೆ 5.40ರ ಸುಮಾರಿಗೆ ಈ ಘಟನೆ ನಡೆದಿದ್ದು, ಮಧ್ಯಾಹ್ನ 2 ಗಂಟೆ ವೇಳೆಗೆ ರೈಲ್ವೆ ಟ್ರಾೃಕ್ ಮೇಲೆ ಕುಸಿದ ಗುಡ್ಡ ತೆರವುಗೊಳಿಸುವ ಕಾರ್ಯಾಚರಣೆ ಪೂರ್ಣಗೊಂಡಿದೆ. ಬಳಿಕ ರೈಲು, ಆಗಮಿಸಿದ್ದ ಮಾರ್ಗವಾಗಿಯೇ ಪುನಃ ಮಡಗಾಂವ್‌ಗೆ ತೆರಳಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net