

ಹುಬ್ಬಳ್ಳಿ : ಉಗರ ಖುರ್ದ- ವಿಜಯನಗರ ಡಬ್ಲಿಂಗ್ ಮಾರ್ಗದಲ್ಲಿ ಇಂಜಿನಿಯರಿಂಗ್ ಕಾಮಗಾರಿ ನಡೆದಿರುವುದರಿಂದ ವಿವಿಧ ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.
ಮೇ 28 ರಿಂದ ಜೂನ್ 6ರವರೆಗೆ ಎಸ್ಎಸ್ಎಸ್ ಹುಬ್ಬಳ್ಳಿ - ಮೀರಜ್ ಡೈಲಿ ಎಕ್ಸ್ಪ್ರೆಸ್, ಮೇ 30 ರಿಂದ ಜೂ. 7ರವರೆಗೆ ಮೀರಜ್ - ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಎಕ್ಸ್ಪ್ರೆಸ್, ಮೇ 28ರಂದು ಮೀರಜ್ - ಲೋಂಡಾ ಡೈಲಿ ಎಕ್ಸ್ಪ್ರೆಸ್ ಸ್ಪೇಷಲ್, ಮೇ 29ರಿಂದ ಜೂ. 6ರವರೆಗೆ ಮೀರಜ್ - ಕ್ಯಾಸ್ಟಲ್ರಾಕ್ ಡೈಲಿ ಎಕ್ಸ್ಪ್ರೆಸ್, ಕ್ಯಾಸ್ಟಲ್ ರಾಕ್- ಮೀರಜ್ ಡೈಲಿ ಎಕ್ಸ್ಪ್ರೆಸ್ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ.
ಭಾಗಶಃ ರದ್ದು : ಮೇ 28 ರಿಂದ ಜೂ. 5ರವರೆಗೆ ತಿರುಪತಿ - ಶ್ರೀ ಛತ್ರಪತಿ ಸಾಹು ಮಹಾರಾಜ ಟರ್ವಿುನಸ್ (ಕೊಲ್ಲಾಪುರ) ಹರಿಪ್ರಿಯಾ ಎಕ್ಸ್ಪ್ರೆಸ್ ರೈಲು ಸಂಚಾರ ಬೆಳಗಾವಿ - ಕೊಲ್ಲಾಪುರ ಮಧ್ಯೆ ರದ್ದಾಗಲಿದ್ದು, ಈ ರೈಲು ಬೆಳಗಾವಿವರೆಗೆ ಮಾತ್ರ ಸಂಚರಿಸಲಿದೆ.
ಮೇ 29 ರಿಂದ ಜೂ. 6ರವರೆಗೆ ಶ್ರೀ ಛತ್ರಪತಿ ಸಾಹು ಮಹಾರಾಜ ಟರ್ವಿುನಸ್ (ಕೊಲ್ಲಾಪುರ)- ತಿರುಪತಿ ಹರಿಪ್ರಿಯಾ ಎಕ್ಸ್ಪ್ರೆಸ್ ರೈಲು ಸಂಚಾರ ಕೊಲ್ಲಾಪುರ-ಬೆಳಗಾವಿ ಮಧ್ಯೆ ರದ್ದಾಗಲಿದ್ದು, ಈ ರೈಲು ಬೆಳಗಾವಿಯಿಂದ ಸಂಚಾರ ಪ್ರಾರಂಭಿಸಲಿದೆ.