ರೈಲು ಸಂಚಾರ ರದ್ದು

TRAin Rail new
Published on

ಹುಬ್ಬಳ್ಳಿ :ಕ್ಯಾಸಲ್​ರಾಕ್​ ಮತ್ತು ಕರಂಜೊಲ್​ ನಿಲ್ದಾಣಗಳ ಮಧ್ಯೆ ಭೂಕುಸಿತದಿಂದಾಗಿ ಈ ಮಾರ್ಗದ ವಿವಿಧ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದು ಹಾಗೂ ತಾತ್ಕಾಲಿಕ ರದ್ದುಗೊಳಿಸಲಾಗಿದೆ.

ಜು. 30ರಂದು ಯಶವಂತಪುರ - ವಾಸ್ಕೊ ಡೈಲಿ ಎಕ್ಸ್​ಪ್ರೆಸ್ ಹಾಗೂ ವಾಸ್ಕೊ- ಯಶವಂತಪುರ ಡೈಲಿ ಎಕ್ಸ್​ಪ್ರೆಸ್ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ.

ಭಾಗಶಃ ರದ್ದು : ಜು. 28ರಂದು ಹಜರತ್ ನಿಜಾಮುದ್ದಿನ್ - ವಾಸ್ಕೊ ಡೈಲಿ ಸೂಪರ್ ಫಾಸ್ಟ್ ಎಕ್ಸ್​ಪ್ರೆಸ್ ರೈಲು ಬೆಳಗಾವಿವರೆಗೆ ಮಾತ್ರ ಸಂಚರಿಸಲಿದೆ. ಜು. 30ರಂದು ವಾಸ್ಕೊ - ಹಜರತ್ ನಿಜಾಮುದ್ದಿನ್ ಎಕ್ಸ್​ಪ್ರೆಸ್ ರೈಲು ಬೆಳಗಾವಿಯಿಂದ ಸಂಚಾರ ಪ್ರಾರಂಭಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net