

ಮಂಗಳೂರು : ನೈಋತ್ಯ ರೈಲ್ವೆ ವ್ಯಾಪ್ತಿಯ ಎಡಕುಮೇರಿ ಮತ್ತು ಕಡಗರವಳ್ಳಿ ನಿಲ್ದಾಣಗಳ ಮಧ್ಯೆ ಗುಡ್ಡ ಕುಸಿತ ಉಂಟಾಗಿರುವ ಕಾರಣ ಆ.4 , 5 ಮತ್ತು 6ರಂದು ಹಲವು ರೈಲು ಸಂಚಾರ ರದ್ದು ಪಡಿಸಲಾಗಿದೆ
ಆ.4 ಮತ್ತು 5 ರಂದು ಕೆಎಸ್‌ಆರ್ ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್ (ರೈಲು ನಂ.16511) , ಆ.5ಮತ್ತು 6 ರಂದು ಕಣ್ಣೂರು- ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ (ರೈಲು ನಂ.16512) , ಆ.4 ಮತ್ತು 5 ರಂದು ಕೆಎಸ್‌ಆರ್ ಬೆಂಗಳೂರು-ಕಾರವಾರ ಸ್ಪೆಷಲ್ ಎಕ್ಸ್‌ಪ್ರೆಸ್ (ರೈಲು ನಂ.16595) , ಆ.5ಮತ್ತು 6ರಂದು ಕಾರವಾರ -ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ (ರೈಲು ನಂ.16596) ಸಂಪೂರ್ಣ ರದ್ದು ಪಡಿಸಲಾಗಿದೆ.
ಆ.4 ಮತ್ತು 5 ರಂದು ಎಸ್‌ಎಂವಿಟಿ ಬೆಂಗಳೂರು-ಮುರುಡೇಶ್ವರ ಎಕ್ಸ್‌ಪ್ರೆಸ್ (ರೈಲು ನಂ.16585), ಆ.5 ಮತ್ತು 6 ರಂದು ಮುರುಡೇಶ್ವರ -ಎಸ್‌ಎಂವಿಟಿ ಬೆಂಗಳೂರು-ಮುರುಡೇಶ್ವರ ಎಕ್ಸ್‌ಪ್ರೆಸ್ (ರೈಲು ನಂ.16586), ಆ.4 ಮತ್ತು 5 ರಂದು ವಿಜಯಪುರ- ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ (ರೈಲು ನಂ.07377), ಆ.5 ಮತ್ತು 6 ರಂದು ಮಂಗಳೂರು ಸೆಂಟ್ರಲ್ - ವಿಜಯಪುರ ಸ್ಪೆಷಲ್ ಎಕ್ಸ್‌ಪ್ರೆಸ್ (ರೈಲು ನಂ.07378) ಸಂಪೂರ್ಣ ರದ್ದು ಪಡಿಸಲಾಗಿದೆ.
ಆ.5ರಂದು ಯಶವಂತಪುರ ಜಂಕ್ಷನ್-ಕಾರವಾರ ಎಕ್ಸ್‌ಪ್ರೆಸ್ (ರೈಲು ನಂ.16515) , ಆ.6ರಂದು ಕಾರವಾರ -ಯಶವಂತಪುರ ಜಂಕ್ಷನ್ (ರೈಲು ನಂ.16516), ಆ.4ರಂದು ಯಶವಂತಪುರ ಜಂಕ್ಷನ್ -ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ (ರೈಲು ನಂ.16575) , ಆ.5ರಂದು ಮಂಗಳೂರು ಜಂಕ್ಷನ್ - ಯಶವಂತಪುರ ಜಂಕ್ಷನ್ ಎಕ್ಸ್‌ಪ್ರೆಸ್ (ರೈಲು ನಂ.16576) ಸಂಪೂರ್ಣ ರದ್ದು ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
.........................