ರೈಲು ಸಂಚಾರ ಭಾಗಶಃ ರದ್ದು

BELGAUM NEW
Published on

ಹುಬ್ಬಳ್ಳಿ : ಕುಂದಗೋಳ ರೈಲು ನಿಲ್ದಾಣದಲ್ಲಿ ಕೈಗೊಂಡಿರುವ ಪಾದಚಾರಿ ಮೇಲ್ಸೇತುವೆ ಕಾಮಗಾರಿ ಹಿನ್ನೆಲೆಯಲ್ಲಿ ಆ. 15 ರಂದು ಈ ಮಾರ್ಗದ ವಿವಿಧ ರೈಲುಗಳ ಸಂಚಾರ ಭಾಗಶಃ ರದ್ದುಗೊಳಿಸಲಾಗಿದೆ.

ಮೈಸೂರು - ಬೆಳಗಾವಿ ವಿಶ್ವಮಾನವ ಡೈಲಿ ಎಕ್ಸ್​ಪ್ರೆಸ್ ರೈಲು ಸಂಚಾರ ಬಿರೂರ- ಬೆಳಗಾವಿ ಮಧ್ಯೆ ರದ್ದಾಗಿದ್ದು, ಈ ರೈಲು ಬಿರೂರವರೆಗೆ ಮಾತ್ರ ಸಂಚರಿಸಲಿದೆ. ಬೆಳಗಾವಿ - ಮೈಸೂರು ವಿಶ್ವಮಾನವ ರೈಲು ಸಂಚಾರ ಬೆಳಗಾವಿ ಮತ್ತು ಬಿರೂರ ಮಧ್ಯೆ ರದ್ದಾಗಿದ್ದು, ಈ ರೈಲು ಬಿರೂರಿನಿಂದ ಸಂಚಾರ ಪ್ರಾರಂಭಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net