

ಮೂಡುಬಿದಿರೆ: ಇರುವೈಲು ಗ್ರಾಮದ ಕೋರಿಬೆಟ್ಟುವಿನಲ್ಲಿ ಇಸ್ಪೀಟ್ ಅಡ್ಡೆಗೆ ದಾಳಿ ನಡೆಸಿದ ಮೂಡುಬಿದಿರೆ ಇನ್‌ಸ್ಪೆಕ್ಟರ್ ಸಂದೇಶ್ ಪಿ.ಜಿ. ನೇತೃತ್ವದ ಪೊಲೀಸರ ತಂಡ 7 ಮಂದಿಯನ್ನು ಬಂಧಿಸಿದೆ. ಅಕ್ಬರ್, ಸಂತೋಷ್, ಪ್ರಶಾಂತ್, ಮಹಾಬಲ ಪೂಜಾರಿ, ಪ್ರಜ್ವಲ್, ಗಿರೀಶ್, ರಾಜೇಶ್ ಬಂಧಿತರು. ಗಣೇಶ್, ಶ್ರೀನಾಥ್, ದಿನೇಶ್ ಕೆಂಪುಗುಡ್ಡೆ, ಕೇಶವ ಯಾನೆ ಅಪ್ಪು ಹಾಗೂ ಮತ್ತಿತರರು ಓಡಿ ಹೋಗಿದ್ದಾರೆ. ಆರೋಪಿಗಳಿಂದ 10 ಸಾವಿರ ರೂ., 2 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸ್ ಸಿಬ್ಬಂದಿ ರಾಜೇಶ್, ನಾಗರಾಜ್, ಸುರೇಶ್, ವೆಂಕಟೇಶ್, ಚಂದ್ರಶೇಖರ ಹಾಗೂ ಚಾಲಕ ಉಮೇಶ್ ಕಾರ್ಯಾಚರಣೆಯಲ್ಲಿದ್ದರು.