

ಇಂಡಿ : ಪಟ್ಟಣದ ತಾಲೂಕು ಉಪ ನೋಂದಣಾಧಿಕಾರಿಗಳ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ಬುಧವಾರ ಬೆಳಗ್ಗೆ ದಾಳಿ ನಡೆಸಿದರು. ಕಚೇರಿ ಪ್ರಾರಂಭವಾಗುವ ಮುನ್ನವೇ ಸಾರ್ವಜನಿಕರಂತೆ ಆಗಮಿಸಿ ಕುಳಿತು ಕಚೇರಿಯಲ್ಲಿನ ಏಜೆಂಟರ ಚಲನವಲನಗಳ ಮೇಲೆ ನಿಗಾ ಇರಿಸಿ, ನಂತರ 11 ಗಂಟೆ ವೇಳೆಗೆ ದಾಳಿ ನಡೆಸಿದರು.
ಕಚೇರಿಯಲ್ಲಿ ಲಂಚ ಪಡೆಯುವ ಕುರಿತು ಸಾರ್ವಜನಿಕರಿಂದ ದೂರುಗಳ ಬಂದ ಹಿನ್ನೆಲೆಯಲ್ಲಿ ಈ ದಾಳಿ ಮಾಡಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದು, ವಿವಾಹ ನೋಂದಣಿ, ಆಸ್ತಿ ಖರೀದಿ ಸೇರಿ ಇನ್ನಿತರ ಮಹತ್ತರ ದಾಖಲೆಗಳನ್ನು ಪರಿಶೀಲಿಸಿದ್ದಾಗಿ ತಿಳಿದು ಬಂದಿದೆ.
ಲೋಕಾಯುಕ್ತ ಎಸ್.ಪಿ. ಅನಿತಾ ಹದ್ದಣ್ಣವರ ನೇತೃತ್ವದಲ್ಲಿ ಡಿವೈಎಸ್‌ಪಿ ಅರುಣ ನಾಯಕ, ಇನ್ಸ್‌ಪೆಕ್ಟರ್‌ಗಳಾದ ಆನಂದ ಟಕ್ಕಣ್ಣವರ ಹಾಗೂ ಆನಂದ ಡೋಣಿ ಮತ್ತು ಸಿಬ್ಬಂದಿ ಅಶೋಕ ಜಾಧವ, ಎಂ.ಎಚ್. ಇಚೂರ, ಜಿ.ವಿ. ಖಂಡೇಕರ್, ಅನಿತಾ ಮೆಂಡಿಗೇರಿ, ಚೇತನ್ ಹಿರೇಮಠ, ವಾಸಿಂ ಅಕ್ಕಲಕೋಟ, ಸಂತೋಷ ಚವ್ಹಾಣ್, ಎಸ್.ಎಂ. ಬಳಗಾನೂರ, ಅಶೋಕ ಚವ್ಹಾಣ್, ದಾಳಿಯಲ್ಲಿ ಪಾಲ್ಗೊಂಡಿದ್ದರು.