ಅರ್ಹರಿಗೆ ವಾಸಕ್ಕೆ ಭೂಮಿ ಕಾಯ್ದಿರಿಸಿ

ದಲಿತ ಸಮರ ಸೇನೆ ಕರ್ನಾಟಕ, ಸ್ಲಂ ಜನರ ಕ್ರೀಯಾವೇದಿಕೆಯಿಂದ ಮನವಿ
ಲಿಂಗಸುಗೂರು ತಹಸೀಲ್ದಾರ್ ಸತ್ಯಮ್ಮ, ಸಹಾಯಕ ಆಯುಕ್ತ ಕಚೇರಿ ಗ್ರಾಮ ಆಡಳಿತಾಧಿಕಾರಿ ದೃವ ದೇಶಪಾಂಡೆ ಅವರಿಗೆ ದಲಿತ ಸಮರ ಸೇನೆ ಕರ್ನಾಟಕ, ಸ್ಲಂ ಕ್ರೀಯಾ ವೇದಿಕೆಯಿಂದ ಮನವಿ ಸಲ್ಲಿಸಲಾಯಿತು. ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ನೀಲಕಂಠ, ತಾಲೂಕು ಅಧ್ಯಕ್ಷ ಅಶ್ಮತ್, ರಂಗಮ್ಮ, ರಾಬಿಯಾ, ಶಂಕರ್, ರೇಣುಕಮ್ಮ, ಮಾಬಮ್ಮ, ಬಸವರಾಜ ಇದ್ದರು.

Published on: 

ಲಿಂಗಸುಗೂರು: ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದ ಅರ್ಹರಿಗೆ ಮುದಗಲ್ಲ ಪುರಸಭೆ ವ್ಯಾಪ್ತಿಯಲ್ಲಿ ವಾಸಕ್ಕೆ ಸರ್ಕಾರಿ ಭೂಮಿಯನ್ನು ಕಾಯ್ದಿರಿಸಬೇಕು ಎಂದು ಒತ್ತಾಯಿಸಿ ದಲಿತ ಸಮರ ಸೇನೆ ಕರ್ನಾಟಕ, ಸ್ಲಂ ಜನರ ಕ್ರೀಯಾವೇದಿಕೆಯಿಂದ ತಹಸೀಲ್ದಾರ್ ಸತ್ಯಮ್ಮ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.

ಮುದಗಲ್ಲ ಪುರಸಭೆ ವ್ಯಾಪ್ತಿಯಲ್ಲಿ ವಾಸಮಾಡುತ್ತಿರುವ ಹಿಂದುಳಿದ, ಅಲ್ಪಸಂಖ್ಯಾತ, ವಿಶೇಷ ವೃತ್ತಿಪರರು ಉಳ್ಳವರ ಮನೆಗಳಲ್ಲಿ ಮನೆ ಕೆಲಸ ಮಾಡುತ್ತಿದ್ದಾರೆ. ಪುಟ್ಟಿ ಹೊತ್ತು ಬೀದಿ ಬೀದಿಗಳಲ್ಲಿ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದಾರೆ.

ಸುಮಾರು 120ಕ್ಕೂ ಹೆಚ್ಚು ಅರ್ಹರನ್ನು ಗುರುತಿಸಿ ಮುದಗಲ್ಲ ಪುರಸಭೆ ಅಧಿಕಾರಿಗಳು ಸೂಕ್ತ ದಾಖಲೆಗಳನ್ನು ಸ್ವೀಕರಿಸಿ ಪಟ್ಟಿ ತಯಾರಿಸಿದ್ದಾರೆ. ಸ್ಥಳೀಯವಾಗಿ ಲಭ್ಯವಿರುವ ಸರ್ಕಾರಿ ಜಮೀನು ಕಾಯ್ದಿರಿಸಿದ್ದಾರೆ. ಮುದಗಲ್ಲ ಪುರಸಭೆ ವ್ಯಾಪ್ತಿಯ ಸ.ನಂ 593 ರಲ್ಲಿ 65 ಎಕರೆ 31 ಗುಂಟೆ ಸರ್ಕಾರಿ ಭೂಮಿ ಇದ್ದು ವಾಸಕ್ಕೆ ಯೋಗ್ಯವಾಗಿದ್ದು ಈ ಭೂಮಿಯನ್ನು ಗುರುತಿಸಿ ಕಾಯ್ದಿರಿಸಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.

ಸಂಘಟನೆಯ ಪ್ರಮುಖರಾದ ಹನುಮವ್ವ, ರಜಿಯಾ ಬೇಗಂ, ಹನುಮಮ್ಮ, ತಿಮ್ಮಯ್ಯ, ಆರೀಫ್, ಎಚ್‌ಡಿ ಅಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net