ತುರ್ವಿಹಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಪ್ರಾಚಾರ್ಯ ಕೆ.ಖಾದರ್‌ಪಾಷಾ ಉಪನ್ಯಾಸ ನೀಡಿದರು. ಹಿರಿಯ ಪತ್ರಕರ್ತ ಬಸವರಾಜ ಭೋಗಾವತಿ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸುರೇಶ ಕುರ್ಡಿ, ಜಿಲ್ಲಾ ಕಸಾಪ ಕಾರ್ಯದರ್ಶಿ ತಾಯಪ್ಪ ಹೊಸೂರು, ಪತ್ರಕರ್ತ ಪಿ.ಪರಮೇಶ ಮಾತನಾಡಿದರು. ಸರ್ಕಾರಿ ಪದವಿ ಕಾಲೇಜ್ ಪ್ರಾಧ್ಯಾಪಕ ಡಾ. ಸೈಯದ್ ಮಿನಾಜ್ ಉಲ್ ಹಸನ್ ಅಧ್ಯಕ್ಷತೆ ವಹಿಸಿದ್ದರು. ನಂತರ ಯುವ ಕವಿಗಳಿಂದ ಕವಿಗೋಷ್ಠಿ ನಡೆಯಿತು. ಕಸಾಪ ತಾಲೂಕು ಅಧ್ಯಕ್ಷ ಶರಣಬಸವ ನೀರಮಾನ್ವಿ, ವೈದ್ಯೆ ಪ್ರಜ್ಞಾ ಹರಿಪ್ರಸಾದ್, ಪಿಎಲ್‌ಡಿಬಿ ಮಾಜಿ ಅಧ್ಯಕ್ಷ ಶಿವಶಂಕರಗೌಡ ಬಾಗಲವಾಡ, ಸಾಹಿತಿಗಳಾದ ಸುಪ್ರಿತಾ ಕೆ.ಆರ್., ಗುಂಡಪ್ಪ ರಾಠೋಡ್, ಉಪನ್ಯಾಸಕ ಡಾ.ಬಸವರಾಜ ಸುಂಕೇಶ್ವರ, ಯುವಜನ ಬಳಗ ಸಂಚಾಲಕರಾದ ಡಾ.ಸೈಯದ್ ಮುಜೀಬ್ ಆಹ್ಮದ್, ರವಿಶರ್ಮ ಜಾನೇಕಲ್ ಇತರರಿದ್ದರು.