ಸಿಂಧನೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಹಿಳೆಯರಿಗಾಗಿ ಉಚಿತ ಯೋಗ ಶಿಬಿರದಲ್ಲಿ ಮಸ್ಕಿ ಶುಭೋದಯ ಪಬ್ಲಿಕ್ ಶಾಲೆಯ ಅಧ್ಯಕ್ಷೆ ಡಾ.ಸೌಮ್ಯಾ ಪಾಟೀಲ್, ಆಶ್ರಮದ ಅಧ್ಯಕ್ಷ ಸ್ವಾಮಿ ಸದಾನಂದ ಮಹಾರಾಜ್, ಸಿಂಧನೂರು ಹೆಲ್ತ್‌ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಯ್ಯ ಶೆಟ್ಟಿ, ನೇತ್ರ ತಜ್ಞ ಡಾ. ಚನ್ನನಗೌಡ ಪಾಟೀಲ್, ಯೋಗ ಶಿಕ್ಷಕ ಡಾ.ಪತ್ರಯ್ಯಸ್ವಾಮಿ ಹಿರೇಮಠ ಇದ್ದರು.
ಸಿಂಧನೂರು: ಪ್ರತಿಯೊಬ್ಬರೂ ನಿತ್ಯ ಜೀವನದಲ್ಲಿ ಯೋಗ ರೂಢಿಸಿಕೊಂಡರೆ ಸಕಲ ರೋಗಗಳಿಂದ ದೂರವಿದ್ದು, ಉತ್ತಮ ಬದುಕು ನಡೆಸಬಹುದು ಎಂದು ಸಿಂಧನೂರು ಹೆಲ್ತ್‌ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಯ್ಯ ಶೆಟ್ಟಿ ಹೇಳಿದರು.
ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಹಿಳೆರಿಯಗಾಗಿ ಉಚಿತ ಯೋಗ ಶಿಬಿರ ಉದ್ಘಾಟಿಸಿ ಮಾತನಾಡಿದರು. ಒತ್ತಡದ ಜೀವನಕ್ಕೆ ಯೋಗವೇ ಮದ್ದಾಗಿದೆ.
ನಿತ್ಯಲೂ ವಿವಿಧ ಸರಳ ಆಸನಗಳನ್ನು ಮಾಡುವ ಮೂಲಕ ಚೈತನ್ಯ ತಂದುಕೊಳ್ಳಬಹುದಾಗಿದೆ. ಅದರಲ್ಲೂ ಪ್ರಾಣಾಯಾಮವು ಮುಖ್ಯವಾಗಿದೆ ಎಂದರು. ಮಸ್ಕಿ ಶುಭೋದಯ ಪಬ್ಲಿಕ್ ಶಾಲೆ ಅಧ್ಯಕ್ಷೆ ಡಾ.ಸೌಮ್ಯಾ ಪಾಟೀಲ್ ಮಾತನಾಡಿ, ಯೋಗ ಮಾಡುವುದರಿಂದ ಮಹಿಳೆಯರು ಮಾನಸಿಕ ಮತ್ತು ದೈಹಿಕವಾಗಿ ಸದೃಢವಾಗಬಹುದು ಎಂದರು.
ನೇತ್ರ ತಜ್ಞ ಡಾ. ಚನ್ನನಗೌಡ ಪಾಟೀಲ್ ಮಾತನಾಡಿದರು. ಯೋಗ ಶಿಕ್ಷಕ ಡಾ.ಪತ್ರಯ್ಯಸ್ವಾಮಿ ಹಿರೇಮಠ ಶಿಬಿರ ನಡೆಸಿಕೊಟ್ಟರು. ಆಶ್ರಮದ ಅಧ್ಯಕ್ಷ ಸ್ವಾಮಿ ಸದಾನಂದ ಮಹಾರಾಜ್, ಶಿಕ್ಷಕ ಕಳಕಪ್ಪ ಗಡೇದ್ ಇತರರಿದ್ದರು.