ಹೃದಯಾಘಾತವಾದ ವ್ಯಕ್ತಿಗೆ ಯಕ್ಕೋ ಚಿಕಿತ್ಸೆ ಯಶಸ್ವಿ

dr.ajith kulakrni
dr.ajith kulakrni
Published on

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ಸುರೇಂದ್ರ, ವೈ ಎಂಬುವವರು ಆಸ್ಪತ್ರೆಗೆ ದಾಖಲಾಗಿ ಪರೀಕ್ಷೆಗಳನ್ನು ನಡೆಸಿದಾಗ ಗಂಭೀರ ಸಮಸ್ಯೆಗಳಿರುವದು ಪತ್ತೆಯಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಹೈದ್ರಾಬಾದ್ ಯಶೋಧಾ ಆಸ್ಪತ್ರೆಗೆ ಸಂಪರ್ಕಿಸಿ ಯಕ್ಕೋ ಚಿಕಿತ್ಸೆ ಸಂಪರ್ಕಿಸಿದಾಗ ಯಶೋಧಾ ಆಸ್ಪತ್ರೆಯ ತುರ್ತು ಚಿಕಿತ್ಸಾ ತಂಡ ಆಗಮಿಸಿ ಯಕ್ಕೋ ಚಿಕಿತ್ಸೆ ಪ್ರಾರಂಭಿಸಲಾಯಿತು.
ಚಿಕಿತ್ಸೆಗೆ ಸ್ಪಂದಿಸಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಹೈದ್ರಾಬಾದ ಯಶೋಧಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಸಿದ್ದರಿಂದ ಗುಣಮುಖವಾಗಲು ಸಾಧ್ಯವಾಗಿದೆ. ದೊಡ್ಡ ನಗರಗಳಿಗೆ ಮಾತ್ರ ಸೀಮಿತವಾದ ಯಕ್ಕೋ ಚಿಕಿತ್ಸೆ ಜಿಲ್ಲಾ ಮಟ್ಟದಲ್ಲಿಯೂ ದೊರೆಯುವಂತಾಗಿರುವದು ಬಹುವಿಧ ಆರೋಗ್ಯ ಸಮಸ್ಯೆ ಎದುರಿಸುವ ರೋಗಿ ಗಳಿಗೆ ದೊರೆತರೆ ಪ್ರಾಣ ರಕ್ಷಿಸಲು ಸಾಧ್ಯವಾಗಲಿದೆ. ಯಶೋಧಾ ಆಸ್ಪತ್ರೆಯಲ್ಲಿ ನುರಿತ ತಂಡ ಆಗಮಿಸಿ ಚಿಕಿತ್ಸೆಗೆ ಒದಗಿಸಿದೆ. ಸಾರ್ವಜನಿಕರು ಯಕ್ಕೋ ಚಿಕಿತ್ಸೆ ಅವಶ್ಯಕತೆಯಿದ್ದಲ್ಲಿ ಪಡೆಯಲುಸಾಧ್ಯವಾಗಿದೆ. ಎಲ್ಲರಿಗೂ ಯಕ್ಕೋ ಚಿಕಿತ್ಸೆ ಒದಗಿಸಲು ಆಗುವದಿಲ್ಲವಾದರೂ ಅಗತ್ಯವಿರುವವರ ಜೀವ ರಕ್ಷಣೆಗೆ ಸಹಕಾರಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಯಶೋಧ ಆಸ್ಪತ್ರೆಯ ನಿರ್ದೇಶಕ ಡಾ.ಭರತ ವಿಜಯ ಪುರೋಹಿತ್,ಡಾ.ವೆಂಕಟರಮಣ, ಚಿಕಿತ್ಸೆಗೆ ಒಳಗಾದ ಸುರೇಂದ್ರ, ಗೌತಮ ಚಂದ್ ಗಿನಿಯಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net