ಸರ್ಕಾರಕ್ಕೆ ತಪ್ಪು ಬೆಳೆ ಸಮೀಕ್ಷೆ ವರದಿ, ಕೇಸ್

ಸಮೀಕ್ಷೆ
ಸಮೀಕ್ಷೆ
Published on
ಮಾನ್ವಿ: ತಾಲೂಕಿನ ಆಲ್ದಾಳ, ಗವಿಗಟ್ಟು, ಭೋಗಾವತಿ ಮತ್ತು ಅಮರಾವತಿ ಗ್ರಾಮಗಳಲ್ಲಿ ಜೋಳ ಬೆಳೆ ಇಲ್ಲದಿದ್ದರು ಜೋಳ ಬೆಳೆಯಲಾಗಿದೆ ಎಂದು ಸರ್ಕಾರಕ್ಕೆ ತಪ್ಪು ಸಮೀಕ್ಷೆ ವರದಿ ನೀಡಿದವರ ವಿರುದ್ದ ಕೃಷಿ ಸಹಾಯಕ ನಿರ್ದೇಶಕ ಗುರುನಾಥ ನೀಡಿದ ದೂರಿನ ಮೇರೆಗೆ ಪಟ್ಟಣ ಠಾಣೆಯಲ್ಲಿ ಗರುವಾರ ಪ್ರಕರಣ ದಾಖಲಾಗಿದೆ. 
2025-26ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಜ.1 ರಿಂದ ಫೆ.28 ಅವಧಿಯಲ್ಲಿ ಬೆಳೆ ಸಮೀಕ್ಷೆ ಮಾಡಿದ್ದಾರೆ. ಹೊಲಗಳಲ್ಲಿ ಬೇರೆ ಬೆಳೆಗಳು ಇದ್ದರೂ ಜೋಳ ಅಂತಾ ಬೆಳೆ ಸಮೀಕ್ಷೆ ತಂತ್ರಾಂಶದಲ್ಲಿ (ಎಪಿಪಿ) ನಲ್ಲಿ ಅಪ್‌ಲೋಡ್ ಮಾಡಿರುವ ಚನ್ನಬಸವ ಆಲ್ದಾಳ, ರಮೇಶ ಗವಿಗಟ್ಟು, ಎಂ.ಅಭಿಷೇಕ್ ಭೋಗಾವತಿ, ಅಬ್ರಾಹಂ ಅಮರಾವತಿ ಹಾಗೂ ಭೂ ಮಾಲೀಕರು ಮತ್ತು ದಲ್ಲಾಳಿಗಳ ವಿರುದ್ಧ ಕೃಷಿ ಅಧಿಕಾರಿ ಗುರುನಾಥ ಪ್ರಕರಣ ದಾಖಲಿಸಿದ್ದಾರೆ. 
ಸರ್ಕಾರ ಜೋಳ ಖರೀದಿ ಕೇಂದ್ರದಲ್ಲಿ ಅನ್ಯ ರಾಜ್ಯದಿಂದ ಕಡಿಮೆ ಬೆಲೆಗೆ ಜೋಳ ಕೊಂಡು ಇಲ್ಲಿ ಮಾರುತ್ತಿರುವವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಜೋಳ ಬೆಳೆದ ಹೊಲಗಳ ಸಮೀಕ್ಷೆ ಮಾಡಿದ ನಂತರ ಜೋಳ ಖರೀದಿಗೆ ಸರ್ಕಾರ ಸೂಚನೆ ನೀಡಿತ್ತು. ಕೆಲವರು ಜೋಳ ಬೆಳೆಯದಿದ್ದರೂ ಪಕ್ಕದ ಹೊಲದಲ್ಲಿ ನಿಂತು ಸಮೀಕ್ಷೆ ಮಾಡಿ ಖರೀದಿ ಕೇಂದ್ರಕ್ಕೆ ಮಾರಲು ಮುಂದಾಗಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಪಿಎಸ್‌ಐ ಮಲ್ಲರಡ್ಡೆಪ್ಪ ಅವರು ತನಿಖೆ ನಡೆಸಿದ್ದಾರೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net