ರೈತ ಕುಟುಂಬಗಳು ಎಳ್ಳು ಹೋಳಿಗೆ, ಎಣ್ಣೆ ಬದನೆಕಾಯಿ, ಕೆಂಪು ಚಟ್ನಿ, ಪಲ್ಲೆ, ಶೇಂಗಾ ಹೋಳಿಗೆ, ಸಜ್ಜಿ ರೊಟ್ಟಿ, ಜೋಳದ ಖಡಕ್ ರೊಟ್ಟಿ, ಕಾಳು ಪಲ್ಯ ಹಲವು ಬಗೆಯ ಚಟ್ನಿ, ಮೊಸರು ಹೀಗೆ ಬಗೆ ಬಗೆಯ ಭಕ್ಷ್ಯಗಳನ್ನು ತಯಾರಿಸಿದರು. ಕುಟುಂಬ ಸದಸ್ಯರು, ಎತ್ತಿ ಬಂಡಿ, ಟಂಟಂ, ಟ್ರ್ಯಾಕ್ಟರ್‌ಗಳಲ್ಲಿ ಮನೆಯ ಸದಸ್ಯರು, ನೆರೆ-ಹೊರೆಯವರೊಂದಿಗೆ ಜಮೀನುಗಳಿಗೆ ಹೋಗಿ ಪೂಜೆ ಸಲ್ಲಿಸಿ ಬೆಳೆಯ ನಡುವೆ ಚರಗ ಚೆಲ್ಲಿ ಊಟ ಮಾಡಿದರು. ತಾಲೂಕಿನ ಕುರುಕುಂದ, ತಿಡಿಗೋಳ, ಜಾಲಿಹಾಳ, ರೌಡಕುಂದ, ಪಗಡದಿನ್ನಿ, ಬೊಮ್ಮನಾಳ, ಗುಂಜಳ್ಳಿ, ಕಲಮಂಗಿ, ತುರ್ವಿಹಾಳ, ಹೊಸಳ್ಳಿ, ಒಳಬಳ್ಳಾರಿ, ಗಿಣಿವಾರ, ಬಾದರ್ಲಿ, ಗೋಮರ್ಸಿ, ಬೆಳಗುರ್ಕಿ, ಹಿರೇಬೇರಿಗಿ, ಚಿಕ್ಕಭೇರಿಗಿ ಸೇರಿದಂತೆ ಇತರ ಕಡೆಗಳಲ್ಲಿಯೂ ಸಂಭ್ರಮದಿಂದ ಹೊಲಗಳಲ್ಲಿ ಚರಗ ಚೆಲ್ಲಿದರು.