ವಿಶ್ವಮಟ್ಟದಲ್ಲಿ ಖ್ಯಾತಿ ಗಳಿಸಿದ ಅಮರಶಿಲ್ಪಿ

ಮಸ್ಕಿ ತಹಸಿಲ್ ಕಚೇರಿಯಲ್ಲಿ ಅಮರಶಿಲ್ಪಿ ಜಕಣಾಚಾರಿ ಜಯಂತಿ ಆಚರಿಸಲಾಯಿತು. ಶಿರಸ್ತೇದಾರ್ ಗುರುಲಿಂಗಯ್ಯ, ಡಾ.ಸಂತೋಷ, ಅಮರೇಶ ಪತ್ತಾರ, ರಾಮಚಂದ್ರಪ್ಪ, ದೇವರಾಜ, ಕಾಳಪ್ಪ ಕಣ್ಣೂರು, ವಿಜಯ ಬಡಿಗೇರ, ಡಾ.ಶಿವಪ್ರಸಾದ ಇತರರಿದ್ದರು.
ಮಸ್ಕಿ ತಹಸಿಲ್ ಕಚೇರಿಯಲ್ಲಿ ಅಮರಶಿಲ್ಪಿ ಜಕಣಾಚಾರಿ ಜಯಂತಿ ಆಚರಿಸಲಾಯಿತು. ಶಿರಸ್ತೇದಾರ್ ಗುರುಲಿಂಗಯ್ಯ, ಡಾ.ಸಂತೋಷ, ಅಮರೇಶ ಪತ್ತಾರ, ರಾಮಚಂದ್ರಪ್ಪ, ದೇವರಾಜ, ಕಾಳಪ್ಪ ಕಣ್ಣೂರು, ವಿಜಯ ಬಡಿಗೇರ, ಡಾ.ಶಿವಪ್ರಸಾದ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಿರಸ್ತೇದಾರ್ ಗುರುಲಿಂಗಯ್ಯ ಅಭಿಪ್ರಾಯ
  • ಮಸ್ಕಿ ಅಮರಶಿಲ್ಪಿ ಜಕಣಾಚಾರಿ ಜಯಂತಿ
ಮಸ್ಕಿ: ಭಾರತದ ವಾಸ್ತುಶಿಲ್ಪ ಕಲೆ ವಿಶ್ವಮಟ್ಟದಲ್ಲಿ ಪ್ರಖ್ಯಾತಿ ಪಡೆಯುವಂತೆ ಮಾಡಿದ ಶ್ರೇಯಸ್ಸು ಅಮರಶಿಲ್ಪಿ ಜಕಣಾಚಾರಿಗೆ ಸಲ್ಲುತ್ತದೆ ಎಂದು ತಹಸಿಲ್ ಕಚೇರಿಯ ಶಿರಸ್ತೇದಾರ್ ಗುರುಲಿಂಗಯ್ಯ ಹೇಳಿದರು.
ಪಟ್ಟಣದ ತಹಸಿಲ್ ಕಚೇರಿಯಲ್ಲಿ ಗುರುವಾರ ಅಮರಶಿಲ್ಪಿ ಜಕಣಾಚಾರಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿರ್ಶಕರ್ಮ ಸಮಾಜದ ಪ್ರಮುಖ ಉದಯಕುಮಾರ ಪತ್ತಾರ್ ಮಾತನಾಡಿ, ಜಕಣಾಚಾರಿ ಅವರ ಶಿಲ್ಪಕಲೆಯ ಸಾಧನೆಯಿಂದ ವಿಶ್ವಕರ್ಮ ಸಮಾಜವನ್ನು ಉನ್ನತ ಸ್ಥಾನಕ್ಕೆ ತಂದಿದ್ದಾರೆ.
ವಿಶ್ವಕರ್ಮರು ಹುಟ್ಟುತ್ತಲೇ ಪ್ರತಿಭಾವಂತರಾಗಿದ್ದು, ಸಮಾಜ ಅವರನ್ನು ಗುರುತಿಸುವ ಕೆಲಸ ಮಾಡಬೇಕಾಗಿದೆ ಎಂದರು. ಪ್ರಮುಖರಾದ ಡಾ.ಸಂತೋಷ, ಅಮರೇಶ ಪತ್ತಾರ, ರಾಮಚಂದ್ರಪ್ಪ, ದೇವರಾಜ, ಕಾಳಪ್ಪ ಕಣ್ಣೂರು, ವಿಜಯ ಬಡಿಗೇರ, ಡಾ.ಶಿವಪ್ರಸಾದ, ವೀರೇಶ ಬಡಿಗಾರ, ಮನೋಹರ ಪತ್ತಾರ, ಮಲ್ಲಿಕಾರ್ಜುನ ಹಸಮಕಲ್, ಪ್ರಭು ಬಳಗಾನೂರು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net