ವಿಶ್ವ ಹಿರಿಯ ನಾಗರಿಕರ ಶೋಷಣೆಯ ಜಾಗೃತಿ ದಿನಾಚರಣೆ

ರಾಯಚೂರಿನ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಹಿರಿಯ ನಾಗರಿಕರ ಶೋಷಣೆಯ ಜಾಗೃತಿ ದಿನಾಚರಣೆಯನ್ನು  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಿದ್ರಾಮಪ್ಪ.ಕೆ, ಉದ್ಘಾಟಿಸಿದರು. ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್, ಸುರಕ್ಷಾ ಹಿರಿಯ ನಾಗರಿಕ ಸಹಾಯವಾಣಿ ಕೇಂದ್ರದ ಮುಖ್ಯಸ್ಥ ಪವನ್ ಕಿಶೋರ ಪಾಟೀಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶರಣಮ್ಮ, ವಕೀಲರಾದ ಗಣೇಶ, ಬಾಸ್ಕರ ಬಾಬು ಇದ್ದರು.
ರಾಯಚೂರಿನ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಹಿರಿಯ ನಾಗರಿಕರ ಶೋಷಣೆಯ ಜಾಗೃತಿ ದಿನಾಚರಣೆಯನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಿದ್ರಾಮಪ್ಪ.ಕೆ, ಉದ್ಘಾಟಿಸಿದರು. ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್, ಸುರಕ್ಷಾ ಹಿರಿಯ ನಾಗರಿಕ ಸಹಾಯವಾಣಿ ಕೇಂದ್ರದ ಮುಖ್ಯಸ್ಥ ಪವನ್ ಕಿಶೋರ ಪಾಟೀಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶರಣಮ್ಮ, ವಕೀಲರಾದ ಗಣೇಶ, ಬಾಸ್ಕರ ಬಾಬು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಕ್ಕಳು ಪಾಲಕರನ್ನು ದೂರ ಮಾಡಬೇಡಿ- ನ್ಯಾಯಾಧೀಶ ಸಿದ್ರಾಮಪ್ಪ.ಕೆ

ರಾಯಚೂರು ಹಿರಿಯ ನಾಗರಿಕರು ತಮ್ಮ ಶಕ್ತಿಯಿದ್ದಾಗ ಮಕ್ಕಳನ್ನು ಉತ್ತಮವಾಗಿ ಪಾಲನೆ, ಪೋಷಣೆ ಮಾಡಲು ಶ್ರಮಿಸುತ್ತಾರೆ. ಆದರೆ ವಯಸ್ಸದ ನಂತರ ಮಕ್ಕಳು ಮನೆಯಿಂದ ಹೊರಗಡೆ ಹಾಕಿರುವ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಿದ್ರಾಮಪ್ಪ.ಕೆ ಹೇಳಿದರು.

ನಗರದ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಸುರಕ್ಷಾ ಸಂಸ್ಥೆ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ ಹಾಗೂ ರೋಟರಿ ಕ್ಲಬ್ ಕೃಷ್ಣ ತುಂಗೆ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಹಿರಿಯ ನಾಗರಿಕರ ಶೋಷಣೆಯ ಜಾಗೃತಿ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಹಿರಿಯ ನಾಗರಿಕರು ಮಕ್ಕಳಿಂದ ದೂರ ಆದ ನಂತರ ಅವರಿಗೆ ದುಡಿಯುವ ಶಕ್ತಿಯೂ ಇರುವುದಿಲ್ಲ.

ಆದರಿಂದ ಹಿರಿಯ ನಾಗರಿಕರಿಗಾಗಿ ಕಾನೂನಿನಲ್ಲಿ ಸಾಕಷ್ಟು ಸೇವೆಗಳು ಮತ್ತು ಸೌಲಭ್ಯಗಳಿದ್ದು, ಹಿರಿಯ ನಾಗರಿಕರಿಗೆ ಶೋಷಣೆಗಳಾದಲ್ಲಿ ಆಯಾ ವಿಭಾಗದ ಸಹಾಯಕ ಆಯುಕ್ತರ ಮೂಲಕ ಪರಿಹರಿಸಿಕೊಳ್ಳಬಹುದಾಗಿದ್ದು,ಹಿರಿಯ ನಾಗರಿಕರ ಪಾಲನೆ ಪೋಷಣೆಯ ಕಾಯ್ದೆಯಡಿ ಅರ್ಜಿ ಸಲ್ಲಿಸಿದಾಗ ಅವರಿಗೆ ನ್ಯಾಯ ಒದಗಿಸಲಾಗುತ್ತದೆ ಆದ್ದರಿಂದ ಹಿರಿಯ ನಾಗರಿಕರು ಕಾಯ್ದೆಯ ಸದುಪಯೋಗ ಪಡೆದುಕೊಂಡು ಜೀವನ ಭತ್ಯೆಯನ್ನು ಪಡೆಯಬಹುದಾಗಿದೆ. ಅರ್ಜಿ ಸಲ್ಲಿಸಿದ 60 ದಿನದಲ್ಲಿ ಸಹಾಯಕ ಆಯುಕ್ತರು ಪ್ರಕರಣಗಳನ್ನು ಇತ್ಯರ್ಥ ಪಡಿಸಬೇಕು ಅಥವಾ ವಿಲೇವಾರಿಗೊಳಿಸಬೇಕು. ಒಂದು ವೇಳೆ ವಿಳಂಬವಾದರೆ ಹೆಚ್ಚುವರಿಯಾಗಿ 30 ದಿನಗಳ ಕಾಲಾವಕಾಶ ನೀಡಲಾಗುತ್ತಿದೆ.

ಒಟ್ಟು 90 ದಿನದಲ್ಲಿ ಅರ್ಜಿಗಳನ್ನು ವಿಲೇವಾರಿಗೊಳಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ಮಾತನಾಡಿ, ಜಾಗತಿಕ ಮಟ್ಟದಲ್ಲಿ ಹಿರಿಯ ನಾಗರಿಕರಿಗಾಗುವ ಶೋಷಣೆಗಳನ್ನು ತಡೆಯಲು ಮತ್ತು ಇದರ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಜೂ.15ರಂದು ಹಿರಿಯ ನಾಗರಿಕರ ಶೋಷಣೆಯ ಜಾಗೃತಿ ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಣೆ ಮಾಡಲಾಗುತ್ತದೆ. ಹಿರಿಯ ನಾಗರಿಕರನ್ನು ನೋಡಿಕೊಳ್ಳುವ ಜವಾಬ್ದಾರಿ ಅವರವರ ಮಕ್ಕಳದ್ದಾಗಿರುತ್ತದೆ ಆದ್ದರಿಂದ ಕಾನೂನು ವ್ಯವಸ್ಥೆಯೂ ಕೂಡ ಹಿರಿಯ ನಾಗರಿಕರ ಜವಾಬ್ದಾರಿಯನ್ನು ಅವರವರ ಕಾನೂನು ಬದ್ಧ ವಾರಸುದಾರರಿಗೆ ನೀಡುತ್ತದೆ. ಹಿರಿಯ ನಾಗರಿಕರು ತಮಗೆ ತೊಂದರೆ ಉಂಟಾದಲ್ಲಿ ಹಿರಿಯ ನಾಗರಿಕರ ಸಹಾಯವಾಣಿ 1090 ಕ್ಕೆ ಕರೆ ಮಾಡಬಹುದಾಗಿದೆ ಎಂದರು.

ಸುರಕ್ಷಾ ಹಿರಿಯ ನಾಗರಿಕ ಸಹಾಯವಾಣಿ ಕೇಂದ್ರದ ಮುಖ್ಯಸ್ಥ ಪವನ್ ಕಿಶೋರ ಪಾಟೀಲ್ ಮಾತನಾಡಿ, ಸಮಾಜದಲ್ಲಿ ಪ್ರಸ್ತುತ ಮಹಿಳೆಯರು ಮತ್ತು ಮಕ್ಕಳಿಗಿರುವ ಆಧ್ಯತೆ ಹಿರಿಯ ನಾಗರಿಕರಿಗೆ ಸಿಗದಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಹಿರಿಯ ನಾಗರಿಕರ ರಕ್ಷಣೆ, ಸುರಕ್ಷತೆ ಮತ್ತು ಅವರ ಅನುಕೂಲಕ್ಕಾಗಿ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರವಿದ್ದು, ಕೇಂದ್ರದಲ್ಲಿ ಶೇ.80 ರಷ್ಟು ಪ್ರಕರಣಗಳನ್ನು ಕೌನ್ಸಲಿಂಗ್ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶರಣಮ್ಮ, ವಕೀಲರಾದ ಗಣೇಶ, ಬಾಸ್ಕರ ಬಾಬು ಸೇರಿದಂತೆ ಅನೇಕರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net