ಅಮೃತ ಯೋಜನೆ ಕಾಮಗಾರಿಗೆ ಮತ್ತೆ ಚಾಲನೆ

ಅಮೃತ ಯೋಜನೆಯಡಿ ಲಿಂಗಸುಗೂರು ತಾಲೂಕಿನ ಕಾಳಾಪೂರ ಹತ್ತಿರದ ಕುಡಿಯುವ ನೀರು ಕೆರೆಯಿಂದ ಶುದ್ಧೀಕರಣ ಘಟಕಕ್ಕೆ ಪೈಪ್‌ಗಳನ್ನು ಅಳವಡಿಸುತ್ತಿರುವುದು.
ಅಮೃತ ಯೋಜನೆಯಡಿ ಲಿಂಗಸುಗೂರು ತಾಲೂಕಿನ ಕಾಳಾಪೂರ ಹತ್ತಿರದ ಕುಡಿಯುವ ನೀರು ಕೆರೆಯಿಂದ ಶುದ್ಧೀಕರಣ ಘಟಕಕ್ಕೆ ಪೈಪ್‌ಗಳನ್ನು ಅಳವಡಿಸುತ್ತಿರುವುದು.
Published on

ಲಿಂಗಸುಗೂರು: ಪಟ್ಟಣ ಹಾಗೂ ಕರಡಕಲ್ಲ ಗ್ರಾಮದ ಪ್ರತಿ ಮನೆಗೂ ನಳದ ಮೂಲಕ ನೀರು ಪೂರೈಸುವ ಕೇಂದ್ರ ಸರ್ಕಾರದ ಅಮೃತ್ ಯೋಜನೆ ಕಾಮಗಾರಿಗೆ ಮತ್ತೆ ಚಾಲನೆ ದೊರೆತಿದೆ.

‘ಆಮೆಗತಿಯಲ್ಲಿ ಅಮೃತ ಯೋಜನೆ’ ಶೀರ್ಷಿಕೆಯಡಿ ಆ.14 ರಂದು ‘ವಿಜಯವಾಣಿ’ಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ನಗರ ನೀರು ಸರಬರಾಜು ಒಳಚರಂಡಿ ಮಂಡಳಿ ಅಧಿಕಾರಿಗಳ ಸೂಚನೆ ಮೇರೆಗೆ ಗುತ್ತಿಗೆದಾರರು ಕಾಮಗಾರಿ ಮತ್ತೆ ಆರಂಭಿಸಿದ್ದಾರೆ. ಕಾಳಾಪೂರ ಹತ್ತಿರದ ಕುಡಿಯುವ ನೀರಿನ ಕೆರೆಯಿಂದ ಶುದ್ಧೀಕರಣ ಘಟಕಕ್ಕೆ ಎಂಎಸ್ ಏರು ಕೊಳವೆ ಪೈಪ್‌ಲೈನ್ ಅಳವಡಿಸುವ ಕಾಮಗಾರಿ ಕೈಗೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net