ಖಾಸಗಿ ಕಂಪನಿ ವಿರುದ್ಧ ಮಹಿಳೆಯರ ಪ್ರತಿಭಟನೆ

ಪಿಎಂ ವಿಶ್ವಕರ್ಮ ಯೋಜನೆಯ, ಸ್ವನಿಧಿ ಯೋಜನೆ ಸೌಲಭ್ಯದ ಹೆಸರಿನಲ್ಲಿ ಹೊಲಿಗೆ ಯಂತ್ರ ನೀಡುವುದಾಗಿ ಹೇಳಿ, ಪ್ರತಿಯೊಬ್ಬ ಫಲಾನುಭವಿಗಳಿಂದ 400ರೂ. ಹಣ ಪಡೆದು  ಹೊಲಿಗೆ ಯಂತ್ರಗಳನ್ನೂ ನೀಡದೇ ಕಚೇರಿಯಿಂದ ಹೊರಗೆ ಹೋಗಿ ಎನ್ನುತ್ತಿದ್ದಾರೆಂದು ಆರೋಪಿಸಿ ಹಲವು ಮಹಿಳೆಯರು ಬುಧವಾರ ಜಿಲ್ಲಾಧಿಕಾರಿ ನಿತೀಶ್ ಕೆ., ಅವರಿಗೆ ಮನವಿ ಮಾಡಿದರು.
ಪಿಎಂ ವಿಶ್ವಕರ್ಮ ಯೋಜನೆಯ, ಸ್ವನಿಧಿ ಯೋಜನೆ ಸೌಲಭ್ಯದ ಹೆಸರಿನಲ್ಲಿ ಹೊಲಿಗೆ ಯಂತ್ರ ನೀಡುವುದಾಗಿ ಹೇಳಿ, ಪ್ರತಿಯೊಬ್ಬ ಫಲಾನುಭವಿಗಳಿಂದ 400ರೂ. ಹಣ ಪಡೆದು ಹೊಲಿಗೆ ಯಂತ್ರಗಳನ್ನೂ ನೀಡದೇ ಕಚೇರಿಯಿಂದ ಹೊರಗೆ ಹೋಗಿ ಎನ್ನುತ್ತಿದ್ದಾರೆಂದು ಆರೋಪಿಸಿ ಹಲವು ಮಹಿಳೆಯರು ಬುಧವಾರ ಜಿಲ್ಲಾಧಿಕಾರಿ ನಿತೀಶ್ ಕೆ., ಅವರಿಗೆ ಮನವಿ ಮಾಡಿದರು.
Published on
ರಾಯಚೂರು ಪಿಎಂ ವಿಶ್ವಕರ್ಮ ಯೋಜನೆಯ, ಸ್ವನಿಧಿ ಯೋಜನೆ ಸೌಲಭ್ಯದ ಹೆಸರಿನಲ್ಲಿ ಹೊಲಿಗೆ ಯಂತ್ರ ನೀಡುವುದಾಗಿ ಹೇಳಿ, ಪ್ರತಿಯೊಬ್ಬ ಫಲಾನುಭವಿಗಳಿಂದ 400ರೂ. ಹಣ ಪಡೆದು ಹೊಲಿಗೆ ಯಂತ್ರಗಳನ್ನೂ ನೀಡದೇ ಕಚೇರಿಯಿಂದ ಹೊರಗೆ ಹೋಗಿ ಎನ್ನುತ್ತಿದ್ದಾರೆಂದು ಆರೋಪಿಸಿ ಹಲವು ಮಹಿಳೆಯರು ಬುಧವಾರ ನೊಂದಣಿ ಮಾಡಿಕೊಳ್ಳುತ್ತಿದ್ದ ಖಾಸಗಿ ಸಂಸ್ಥೆಯ ವಿರುದ್ಧ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾ ಪಂಚಾಯತ್ ಹತ್ತಿರದಲ್ಲಿ ಖಾಸಗಿ ಸಂಸ್ಥೆಯಾದ ಏರೋ ಗ್ಲೋಬಲ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿ ಜಿಲ್ಲೆಯ ವಿವಿಧ ಗ್ರಾಮಗಳ ಮಹಿಳೆಯರಿಗೆ ಕರೆ ಮಾಡಿ. ನಿಮಗೆ ಹೊಲಿಗೆ ಯಂತ್ರ ಬಂದಿದೆ. ಬಂದು ಒಂದು ಆಕೌಂಟ್ ಓಪನ್ ಮಾಡಿಸಿ ಎಂದು ಜಿಲ್ಲೆಯ ಗ್ರಾಮೀಣ ಮಹಿಳೆಯರಿಗೆ ಕರೆ ಮಾಡಿದ್ದು, ಮಹಿಳೆಯರು ಹಲವು ತಿಂಗಳಿಂದ ಕಚೇರಿ ಬಂದು ಕಾದು ನೊಂದಣಿ ಮಾಡಿಸಿಕೊಳ್ಳುತ್ತಿದ್ದರು. ಆದರೆ ಮಂಗಳವಾರ ಮಹಿಳೆಯರಿಗೆ ನಿಮ್ಮನ್ನಾ ರು ಕರೆದಿದ್ದು, ಮೊದಲು ಹೊರಗೆ ಹೋಗಿ ಎಂದು ಸಂಸ್ಥೆಯ ಸಂಬಂಧಪಟ್ಟವರು ಗಧರಿದ್ದು, ಇದಕ್ಕೆ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.
ವಿಶ್ವಕರ್ಮ ಯೋಜನೆಯಡಿ ತರಬೇತಿ ಪಡೆದ ಮಹಿಳೆಯರ ಬ್ಯಾಂಕ್ ಖಾತೆ, ಆಧಾರ ಸಂಖ್ಯೆಯೊಂದಿಗೆ ದಾಖಲೆ ನೀಡುವದಾಗಿ ಸರ್ಕಾರದಿಂದಯಾವುದೇ ಪೂರ್ವಾನುಮತಿ ಪಡೆಯದೇ ಸಂಸ್ಥೆಯೊಂದು ನೂರಾರು ಮಹಿಳೆಯರಿಂದ ತಲಾ 400 ರೂ ಸಂಗ್ರಹಿಸುತ್ತಿದೆ. ನಿತ್ಯವೂ ಮಹಿಳೆಯರು ಆಗಮಿಸಿ ಖಾತೆ ಜೋಡಣೆ ಮಾಡಿಸಿದರೆ ಮಾತ್ರ ಹೊಲಿಗೆ ಯಂತ್ರ ನೀಡುವದಾಗಿ ನಂಬಿಸಲಾಗಿ ತ್ತು ಎಂದು ಹೇಳಲಾಗಿದೆ. ಕೇಂದ್ರ ಸರ್ಕಾರಿಂದ ಅನುಷ್ಟಾನಗೊಳಿಸಲಾಗಿರುವ ವಿಶ್ವಕರ್ಮ ಯೋಜನೆಯಡಿ ಯಾವುದೇ ಸಂಸ್ಥೆಯನ್ನು ನೇಮಿಸದೇ ಇದ್ದರೂ ಅನಧಿಕೃತವಾಗಿ ಹಣ ಸಂಗ್ರಹಿಸಿರುವ ಆರೋಪ ಕೇಳಿಬಂದಿದೆ.
ಫಲಾನುಭವಿಗಳಿಂದ 400 ರೂ ಸಂಗ್ರಹಕ್ಕೆ ಯಾರು ಅನುಮತಿ ನೀಡಿದ್ದಾರೆ ಎಂಬುದು ನಿಗೂಢವಾಗಿಯೇ ಉಳಿದಿದೆ. ಯೋಜನೆ ನೂಡೆಲ್ ಇಲಾಖೆಯಾಗಿ ಜಿಲ್ಲಾ ಕೈಗಾರಿಕಾ ಇಲಾಖೆ ಕಾರ್ಯನಿರ್ವಹಿಸುತ್ತಿದ್ದು ಅನೇಕರು ಇಲಾಖೆಗೆ ಮೌಖಿಕ ದೂರು ನೀಡಿದರೂ ಕೈಗಾರಿಕೆ ಇಲಾಖೆ ಅಧಿಕಾರಿಗಳು ಮೌನವೂ ಸಹ ಅನುಮಾನಕ್ಕೆ ದಾರಿ ಮಾಡಿದೆ ಎಂಬ ದೂರು ಕೇಳಿಬಂದಿದೆ.
ವಿವಿಧ ಸೌಲಭ್ಯದ ಹೆಸರಿನಲ್ಲಿ ಹೊಲಿಗೆ ಯಂತ್ರ ನೀಡುವುದಾಗಿ ಹೇಳಿ, ಪ್ರತಿಯೊಬ್ಬ ಫಲಾನುಭವಿಗಳಿಂದ 400ರೂ. ಹಣ ಪಡೆದಿದ್ದಾರೆಂದು ಆರೋಪಿಸಿ ಮಹಿಳೆಯರು ಪ್ರತಿಭಟನೆ ಮಾಡಿದ್ದು, ಎಸಿ ನೇತೃತ್ವದಲ್ಲಿ ತಪಾಸಣೆ ಮಾಡಿ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ.
ನಿತೀಶ್ ಕೆ., ಜಿಲ್ಲಾಧಿಕಾರಿ ರಾಯಚೂರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net