ವರ್ಷಗಳೇ ಕಳೆದರೂ ಬೇಡಿಕೆಗಳ ಪರಿಗಣನೆ ಯಾಕಿಲ್ಲ ?

ಸಿಂಧನೂರು ನಗರಸಭೆ ಎದುರು ಎಪಿಎಂಸಿ ಹಮಾಲರು ಹಾಗೂ ದುಡಿಯುವ ಮಹಿಳೆಯರು ಎಐಟಿಯುಸಿ ನೇತೃತ್ವದಲ್ಲಿ ಧರಣಿ ನಡೆಸಿದರು.
ಸಿಂಧನೂರು ನಗರಸಭೆ ಎದುರು ಎಪಿಎಂಸಿ ಹಮಾಲರು ಹಾಗೂ ದುಡಿಯುವ ಮಹಿಳೆಯರು ಎಐಟಿಯುಸಿ ನೇತೃತ್ವದಲ್ಲಿ ಧರಣಿ ನಡೆಸಿದರು.
Published on
ಸಿಂಧನೂರು: ಎಪಿಎಂಸಿ ಹಮಾಲರು ಹಾಗೂ ದುಡಿಯುವ ಮಹಿಳೆಯರಿಗೆ ನಿವೇಶನ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ಎಐಟಿಯುಸಿ ನೇತೃತ್ವದಲ್ಲಿ ಹಮಾಲರು ಹಾಗೂ ಮಹಿಳಾ ಕಾರ್ಮಿಕರು ನಗರಸಭೆ ಎದುರು ಗುರುವಾರ ಧರಣಿ ನಡೆಸಿದರು.
ಹಮಾಲರು ಹಾಗೂ ದುಡಿಯುವ ಮಹಿಳೆಯರಿಗೆ ನಿವೇಶನ ನೀಡುವಂತೆ ಹಲವಾರು ವರ್ಷಗಳಿಂದ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದರೂ ಈವರೆಗೆ ಈಡೇರಿಲ್ಲ. ಕಾರ್ಮಿಕರ ಬೇಡಿಕೆಗಳನ್ನು ಇಷ್ಟು ವರ್ಷಗಳಿಂದ ಯಾಕೆ ಪರಿಗಣಿಸಿಲ್ಲ ಎಂದು ನಗರಸಭೆ ಪೌರಾಯುಕ್ತರನ್ನು ಪ್ರಶ್ನಿಸಿದರು. ಪೌರಾಯುಕ್ತರು ಸಂಘದ ಪದಾಧಿಕಾರಿಗಳ ಸಭೆ ಕರೆದು ಬೇಡಿಕೆ ಕುರಿತು ಚರ್ಚಿಸಿದರು.
ಎಪಿಎಂಸಿಗೆ ಸಂಬಂಧಿಸಿದ ನಿವೇಶನ ಹಾಗೂ ಇತ್ತೀಚೆಗೆ ಆನ್‌ಲೈನ್ ಮೂಲಕ ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲಿಸಿ, ಅರ್ಹ ಫಲಾನುಭವಿಗಳ ಪಟ್ಟಿಯನ್ನು ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಕಳಿಸುವುದಾಗಿ ಭರವಸೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net