ಬಿಎಸ್‌ವೈ ಅಭಿಮಾನೋತ್ಸವದಿಂದ ಬಿಜೆಪಿಗೇನು ಲಾಭ?

ಲಿಂಗಸುಗೂರು ಬಿಜೆಪಿ ಕಚೇರಿಯಲ್ಲಿ ಬಿಎಸ್‌ವೈ ಅಭಿಮಾನೋತ್ಸವದ ಪೂರ್ವಭಾವಿ ಸಭೆಯಲ್ಲಿ ಶಾಸಕ ಮಾನಪ್ಪ ವಜ್ಜಲ ಮಾತನಾಡಿದರು. ಮಂಡಲ ಅಧ್ಯಕ್ಷ ಕೆ.ನಾಗಭೂಷಣ, ಪ್ರಮುಖರಾದ ಭೀಮಣ್ಣ ಹಿರೇಮನಿ, ಮಂಜುನಾಥ ಪಾಟೀಲ, ರಾಜು ತಂಬಾಕೆ, ಜಗದೀಶ ಹಿರೇಮಠ, ರಾಜು ರಾಠೋಡ, ಅಮರೇಶ ಗಂಭೀರಮಠ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಅಭಿಮಾನೋತ್ಸವದಿಂದ ಬಿಜೆಪಿಗೆ ನವಚೈತನ್ಯ
  • ಶಾಸಕ ಮಾನಪ್ಪ ವಜ್ಜಲ ಅಭಿಮತ
ಲಿಂಗಸುಗೂರು: ಚಿತ್ರದುರ್ಗದಲ್ಲಿ ಮೇ 9ರಂದು ನಡೆಯಲಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಅಭಿಮಾನೋತ್ಸವ ಕಾರ್ಯಕ್ರಮದಿಂದ ರಾಜ್ಯ ಬಿಜೆಪಿಗೆ ನವಚೈತನ್ಯ ಬರಲಿದೆ ಎಂದು ಶಾಸಕ ಮಾನಪ್ಪ ವಜ್ಜಲ ಹೇಳಿದರು.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಅಭಿಮಾನೋತ್ಸವ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿ,  ಯಡಿಯೂರಪ್ಪ ಅವರು ತಳಮಟ್ಟದಿಂದ ಪಕ್ಷಕ್ಕಾಗಿ ದುಡಿದು, ಹಳ್ಳಿಯಿಂದ ರಾಜ್ಯಮಟ್ಟದವರೆಗೆ ಸೈಕಲ್‌ನಲ್ಲಿ ಸಂಚಾರ ಮಾಡಿ, ಪಕ್ಷ ಸಂಘಟನೆ ಮಾಡಿದ್ದಾರೆ. ಐದು ದಶಕಗಳಿಂದ ಬಡವರು, ರೈತರ ಪರವಾಗಿ ಹೋರಾಟ ಮಾಡಿದ್ದು, ಅವರಿಗೆ ಗೌರವ ಸಲ್ಲಿಸಲು ಅಭಿಮಾನೋತ್ಸವ ನಡೆಸಲಾಗುತ್ತಿದೆ. 
ತಾಲೂಕಿನಿಂದ ಹೆಚ್ಚು ಕಾರ್ಯಕರ್ತರು ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಮಂಡಲ ಅಧ್ಯಕ್ಷ ಕೆ.ನಾಗಭೂಷಣ, ಪ್ರಮುಖರಾದ ಭೀಮಣ್ಣ ಹಿರೇಮನಿ, ಮಂಜುನಾಥ ಪಾಟೀಲ, ರಾಜು ತಂಬಾಕೆ, ಜಗದೀಶ ಹಿರೇಮಠ, ರಾಜು ರಾಠೋಡ, ಅಮರೇಶ ಗಂಭೀರಮಠ, ಭೀಮಸೇನ ಜೋಶಿ, ಜಗನ್ನಾಥ ಕುಲಕರ್ಣಿ ಇತರರಿದ್ದರು.  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net