ಸ್ಥಳಕ್ಕೆ ಬಂದ ಮುಖ್ಯಶಿಕ್ಷಕ ರಾಯನಗೌಡ ಅವರು, ಬಾಲಕಿಯರ ಮನವೊಲಿಸಲು ಪ್ರಯತ್ನಿಸಿದರು. ತಾತ್ಕಾಲಿಕವಾಬಿ ಸಿಆರ್‌ಸಿ ಸೌಮ್ಯ ಅವರು ವಾರ್ಡನ್ ಆಗಿರಲಿದ್ದಾರೆ. ಸೋಮವಾರ ಅಧಿಕಾರಿಗಳು ಬಂದು ಸಮಸ್ಯೆ ಪರಿಹರಿಸಲಿದ್ದಾರೆ ಎಂದು ಭರವಸೆ ನೀಡಿದ ಬಳಿಕ ಹೋರಾಟ ಕೈಬಿಡಲಾಯಿತು. ಈ ವೇಳೆ ಶಿಕ್ಷಕ ಬಸನಗೌಡ ನಿಲೋಗಲ್, ಎಸ್ಡಿಎಂಸಿ ಅಧ್ಯಕ್ಷ ಹಮೀದ್, ಆದೇಶ ನಾಯಕ, ಬಸವರಾಜ ಇತರರಿದ್ದರು.