ಬಲದಂಡೆ ನಾಲೆಗೆ ಏ.15ರತನಕ ನೀರು ಹರಿಸಿ

ಜಾಲಹಳ್ಳಿಯಲ್ಲಿ ರೈತರು ಪ್ರತಿಭಟನೆ ನಡೆಸಿದರು. ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ನರಸಣ್ಣ ನಾಯಕ, ಮುಖಂಡರಾದ ಹನುಮಂತ ಗುರಿಕಾರ, ಮೌನೇಶ ಜಾಲಹಳ್ಳಿ, ಶಿವರಾಜ ಯರಕಮಟ್ಟಿ, ಭೀಮಣ್ಣ ಡೆಂಗಿ, ಗಿರಿಯಪ್ಪ ಪೂಜಾರಿ, ಶಬ್ಬೀರ್ ಇತರರಿದ್ದರು.
ಜಾಲಹಳ್ಳಿಯಲ್ಲಿ ರೈತರು ಪ್ರತಿಭಟನೆ ನಡೆಸಿದರು. ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ನರಸಣ್ಣ ನಾಯಕ, ಮುಖಂಡರಾದ ಹನುಮಂತ ಗುರಿಕಾರ, ಮೌನೇಶ ಜಾಲಹಳ್ಳಿ, ಶಿವರಾಜ ಯರಕಮಟ್ಟಿ, ಭೀಮಣ್ಣ ಡೆಂಗಿ, ಗಿರಿಯಪ್ಪ ಪೂಜಾರಿ, ಶಬ್ಬೀರ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಾಲಹಳ್ಳಿಯಲ್ಲಿ ರೈತ ಸಂಘ ಪ್ರತಿಭಟನೆ
  • ಅವೈಜ್ಞಾನಿಕ ವಾರಬಂದಿಗೆ ಆಕ್ರೋಶ
ದೇವದುರ್ಗ: ನಾರಾಯಣಪುರ ಬಲದಂಡೆ ನಾಲೆಗೆ ಏ.15ರವರೆಗೆ ನಿರಂತರ ನೀರು ಹರಿಸಬೇಕೆಂದು ಒತ್ತಾಯಿಸಿ ತಾಲೂಕಿನ ಜಾಲಹಳ್ಳಿಯ ಡಾ.ಅಂಬೇಡ್ಕರ್ ವೃತ್ತದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ನೀರು ಬಳಕೆದಾರರ ಸಂಘ ಸೋಮವಾರ ಪ್ರತಿಭಟನೆ ನಡೆಸಿದವು.
ತಾಲೂಕಿನ ರೈತರು ಕಾಲುವೆ ನೀರು ನಂಬಿಕೊಂಡು ಭತ್ತ, ಸಜ್ಜೆ, ಮೆಣಸಿನಕಾಯಿ, ಸೂರ್ಯಕಾಂತಿ, ಶೇಂಗಾ ಸೇರಿ ವಿವಿಧ ಬೆಳೆ ಬೆಳೆದಿದ್ದಾರೆ. ಏ.3ಕ್ಕೆ ನೀರು ಹರಿಸುವುದು ನಿಲ್ಲಿಸಿದರೆ ಬೆಳೆಗಳು ಹಾಳಾಗಲಿವೆ. ಏ.15ರವರೆಗೆ ನಿರಂತರವಾಗಿ ನೀರು ಹರಿಸಿದರೆ ಮಾತ್ರ ಬೆಳೆಗಳು ಪೂರ್ಣ ಪ್ರಮಾಣದಲ್ಲಿ ಕೈಗೆ ಬರಲಿವೆ. 
10ದಿನ ವಾರಬಂದಿ ಪದ್ಧತಿ ಜಾರಿಯಿಂದಾಗಿ ಕಾಲುವೆ ಕೊನೇಭಾಗದ ರೈತರಿಗೆ ನೀರು ತಲುಪುತ್ತಿಲ್ಲ. ಏ.3ರಂದು ನೀರು ಬಂದ್ ಮಾಡಿದರೆ ಕಾಳುಕಟ್ಟಿರುವ ಭತ್ತ, ಸೂರ್ಯಕಾಂತಿ, ಸಜ್ಜೆ ಹಾಗೂ ಮೆಣಸಿನಕಾಯಿ ಸೇರಿ ಶೇ.80 ಬೆಳೆಗಳು ಹಾಳಾಗಲಿವೆ. ಈಗಾಗಲೇ ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಲಿದೆ ಎಂದು ದೂರಿದರು.ಕೂಡಲೇ ಸರ್ಕಾರ ತುರ್ತು ಐಸಿಸಿ ಸಭೆ ಕರೆದು ಏ.15ರವರೆಗೆ ನಾಲೆಗೆ ನೀರು ಹರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಬೇಕು. ನಿರ್ಲಕ್ಷೃ ಮಾಡಿದರೆ ರಾಜ್ಯ ಹೆದ್ದಾರಿ ಸಂಚಾರ ತಡೆದು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ನರಸಣ್ಣ ನಾಯಕ, ಮುಖಂಡರಾದ ಹನುಮಂತ ಗುರಿಕಾರ, ಮೌನೇಶ ಜಾಲಹಳ್ಳಿ, ಶಿವರಾಜ ಯರಕಮಟ್ಟಿ, ಭೀಮಣ್ಣ ಡೆಂಗಿ, ಗಿರಿಯಪ್ಪ ಪೂಜಾರಿ, ಶಬ್ಬೀರ್, ರಂಗಣ್ಣ ಕೋಲ್ಕಾರ, ಸಾಬಣ್ಣ ಕಮ್ಮಲದಿನ್ನಿ, ಭೂತಪ್ಪ ದೇವರಮನಿ, ಲಕ್ಕಪ್ಪಗೌಡ ಚಿಂಚೋಡಿ, ಶರಣಗೌಡ ಚಿಂಚೋಡಿ, ಚಿದಾನಂದ, ಹನುಮಂತ ಮಡಿವಾಳ, ರಂಗನಾಥ ಬುಂಕಲದೊಡ್ಡಿ, ದುರುಗಪ್ಪ ಹೊರಟ್ಟಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net